ಸಾರಿಗೆ ಇಲಾಖೆಯ ಮತ್ತೋರ್ವ ನೌಕರ ಸಾವು – ಮನೆ ಖಾಲಿ ಮಾಡುವಂತೆ ಮೇಲಾಧಿಕಾರಿಗಳ ಒತ್ತಡ…..

Suddi Sante Desk

ಹಾಸನ –

ಮನೆ ಖಾಲಿ ಮಾಡುವಂತೆ ಮೇಲಾಧಿಕಾರಿಗಳು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಮುಷ್ಕರ ನಿರತ ಸಾರಿಗೆ ಇಲಾಖೆಯ ನೌಕರರೊಬ್ಬರು ಹೃದಯಾಘಾ ತದಿಂದ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಕಲೇಶಪುರ ಡಿಪೋದಲ್ಲಿ ಚಾಲಕರಾಗಿದ್ದ ಸುಧಾಕರ್‌(52) ಮೃತಪಟ್ಟ ಚಾಲಕನಾಗಿದ್ದಾನೆ. ಸುಧಾಕರ್‌ ಅವರ ಪತ್ನಿ ಜಯಂತಿ ಸಹ ಹಾಸನ ಡಿಪೋದಲ್ಲಿ ಕೆಲಸ ಮಾಡುತ್ತಿದ್ದು, ದಂಪತಿ ಹಾಸನದಲ್ಲಿರುವ ಕೆಎಸ್‌ಆರ್‌ಟಿಸಿ ವಸತಿ ಗೃಹದಲ್ಲಿ ವಾಸವಿದ್ದರು.

ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಗೈರಾಗಿದ್ದ ಕಾರಣ, ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ಒತ್ತಡ ಹೇರಿದ್ದು, ಇದರಿಂದಲೇ ಅವರಿಗೆ ಹೃದಯಾ ಘಾತವಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.