ಬೆಂಗಳೂರು –
ಮಹಾಮಾರಿಯಿಂದ ರಾಜ್ಯದಲ್ಲಿ ಸಾಲು ಸಾಲಾಗಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.ಸಾಕಷ್ಟು ಪ್ರಮಾ ಣದಲ್ಲಿ ಜನರು ಈ ಒಂದು ಸೋಂಕಿಗೆ ಸಾವಿಗೀಡಾ ಗುತ್ತಿದ್ದಾರೆ.ಇನ್ನೂ ಅದರಲ್ಲೂ ಶಿಕ್ಷಕರ ಸಾವು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದು ಇಂದು ಮತ್ತೆ ರಾಜ್ಯದಲ್ಲಿ ಹತ್ತು ಜನ ಶಿಕ್ಷಕ ಶಿಕ್ಷಕಿಯರು ಕೋವಿಡ್ ಗೆ ಬಲಿಯಾಗಿದ್ದಾರೆ.ಮೃತರಾದ ಶಿಕ್ಷಕರು ಈ ಕೆಳಗಿನಂತಿದ್ದಾರೆ
ಪ್ರಮುಖವಾಗಿ ರಾಜ್ಯದಲ್ಲಿ ಶಿಕ್ಷಕರ ಸಾವಿಗೆ ಒಂದು ಕೋವಿಡ್ ಡೂಟಿ ಮತ್ತೊಂದು ತಡವಾಗಿ ರಜೆ ನೀಡಿದ್ದು ಇದರ ನಡುವೆ ಕರ್ತವ್ಯ ಮಾಡುತ್ತಿದ್ದಾರೆ ಹೀಗಾಗಿ ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿ ರುವ ಶಿಕ್ಷಕರಿಗೆ ದೊಡ್ಡ ಸಮಸ್ಯೆಯಾಗಿದೆ
ಇನ್ನೂ ಮೃತರಾದ ಶಿಕ್ಷಕರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ, ಲಕ್ಷ್ಮೀದೇ ವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣ ನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಹನಮಂತಪ್ಪ ಬೂದಿಹಾಳ
ಕಿರಣ ರಘುಪತಿ, ಶಶಿಕುಮಾರ್ ಕೆಂಪೇಗೌಡ, ಆರ್ ನಾರಾಯಣಸ್ವಾಮಿ ಚಿಂತಾಮಣಿ ಕೆ ನಾಗರಾಜ ಬಿ ಎಸ್ ಮಂಜುನಾಥ ಸೇರಿದಂತೆ ಹಲವರು ಸಂತಾಪ ವನ್ನು ಸೂಚಿಸಿದ್ದಾರೆ ಅಲ್ಲದೇ ಮೃತರ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಪರಿಹಾರ ನೀಡುವಂತೆ ಒತ್ತಾಯವ ನ್ನು ಮಾಡಿದ್ದಾರೆ.
ಇನ್ನೂ ಪ್ರಮುಖವಾಗಿ ರಾಜ್ಯದಲ್ಲಿನ ಶಿಕ್ಷಕರ ಸರಣಿ ಸಾವಿನಿಂದಾಗಿ ಶಿಕ್ಷಕರಿಗೆ ಕೋವಿಡ್ ಕಾರ್ಯದಿಂದ ಮುಕ್ತಗೊಳಿಸುವಂತೆ ರಾಜ್ಯದ ಶಿಕ್ಷಕರು ಆಗ್ರಹವನ್ನು ಮಾಡಿದ್ದಾರೆ