ಬೆಂಗಳೂರು –
ಸಾಮಾನ್ಯವಾಗಿ ಜೂನ್ 1 ರಿಂದ ಶೈಕ್ಷಣಿಕ ವರ್ಷ ಆರಂಭವಾಗುತ್ತಿತ್ತು. ಆದರೆ ಕಳೆದ ವರುಷದಿಂದ ಕರೋನಾ ಮಹಾಮಾರಿಯಿಂದಾಗಿ ಎಲ್ಲಾ ತಾಳ ಮೇಳ ತಪ್ಪಿದಂತಾಗಿದ್ದು ಕಳೆದ ವರುಷ ಆ ಕಥೆಯಾ ದರೆ ಈ ವರುಷವೂ ಕೂಡಾ ಇದೇ ಕಥೆಯಾಗಿದೆ. ಇನ್ನೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀ ಕ್ಷಾ ವಿಚಾರಕ್ಕೆ ಬಂದರೆ ಈವರೆಗೆ ಪರೀಕ್ಷೆ ಮುಗಿದು ಫಲಿತಾಂಶ ಬಂದು ಜೂನ್ ಮೊದಲನೇ ಇಲ್ಲವೇ ಎರಡನೇಯ ವಾರದಲ್ಲಿ ಪ್ರವೇಶವನ್ನು ಪಡೆದು ಕೊಂಡು ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ಗಳು ಅಣಿಯಾಗುತ್ತಿದ್ದರು.ಆದರೆ ಕಳೆದ ವರುಷ ಹಾಗೇ ಆದರೆ ಈವರುಷವೂ ಇದೇ ಕಥೆಯಾಗಿದ್ದು ಇನ್ನೂ ಈವರೆಗೆ ಪರೀಕ್ಷೆ ಕುರಿತಂತೆ ಇನ್ನೂ ಯಾವು ದೇ ಅಂತಿಮವಾದ ತೀರ್ಮಾನವಾಗಿಲ್ಲ.ಹೀಗಾಗಿ ಅತ್ತ ಸರ್ಕಾರ ಶಿಕ್ಷಣ ಸಚಿವರು ಗೊಂದಲದಲ್ಲಿದ್ದರೇ ಇತ್ತ ನಾಡಿನಾದ್ಯಂತ ವಿದ್ಯಾರ್ಥಿಗಳು ಕೂಡಾ ಪರೀಕ್ಷೆ ಏನಾಗುತ್ತದೆ ಏನೋ ಎಂಬ ದೊಡ್ಡ ಚಿಂತೆಯಲ್ಲಿ ದ್ದಾರೆ.
ಇನ್ನೂ ಪ್ರಮುಖವಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತಂತೆ ಏನಾದರೂ ಚರ್ಚೆ ಆಗುತ್ತದೆ ಅಂತಿಮವಾದ ತಿರ್ಮಾನವಾಗು ತ್ತದೆ ಎಂದುಕೊಳ್ಳಲಾಗಿತ್ತು ಆದರೆ ಸಭೆಯಲ್ಲಿ ಇದರ ಬಗ್ಗೆ ಮಾತೇ ಇಲ್ಲ. ಚರ್ಚೆಯಾಗಿಲ್ಲ.
ಹೀಗಾಗಿ ಇನ್ನೂ ಕೂಡಾ ಗೊಂದಲ ಗೊಂದಲ ಕಂಡು ಬರುತ್ತಿದೆ. ಈ ಬಗ್ಗೆ ಇನ್ನೂ ಕೂಡಾ ದೊಡ್ಡ ಪ್ರಮಾಣದಲ್ಲಿ ಎಲ್ಲರೂ ಗೊಂದಲದಲ್ಲಿದ್ದು ಮುಂದುವರಿದಿದೆ.ಇವೆಲ್ಲದರ ನಡುವೆ ಈ ಕುರಿತಂತೆ ಸಚಿವ ಸುರೇಶ್ ಕುಮಾರ್ ಮಾತನಾಡಿ ಇನ್ನೂ ಈ ಕುರಿತಂತೆ ತಿರ್ಮಾನವನ್ನು ಕೈಗೊಂಡಿಲ್ಲ ಶೀಘ್ರದಲ್ಲಿ ಯೇ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದಿ ದ್ದಾರೆ ಸಚಿವ ಸುರೇಶ್ ಕುಮಾರ್.
ಸರಿ ತಗೆದುಕೊಳ್ಳಿ ಆದರೆ ಇನ್ನೂ ಯಾವಾಗ ಎಂಬ ಪ್ರಶ್ನೆ ಪರೀಕ್ಷೆಯ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಮತ್ತು ಪೋಷಕರ ದೊಡ್ಡ ಯಕ್ಷ ಪ್ರಶ್ನೆಯಾಗಿ ಕಾಡು ತ್ತಿದೆ.ಇನ್ನೂ ಪ್ರಮುಖವಾಗಿ ಕೊರೊನಾ ಎರಡನೇ ಅಲೆ ನಡುವೆಯೇ ಮೂರನೇ ಅಲೆಯ ಆತಂಕವೂ ಎದುರಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ವರ್ಷ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯು ಪರೀಕ್ಷೆ ನಡೆಸುವುದು ಬೇಡ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಈ ನಡುವೆ ಪ್ರಕಟಣೆ ಹೊರಡಿಸಿರುವ ಸಚಿವ ಸುರೇಶ್ ಕುಮಾರ್, ಪರೀಕ್ಷೆ ಬಗ್ಗೆ ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ಪೋಷಕರ ಜೊತೆ ಸಮಾಲೋಚನೆ ಮುಂದುವರಿದಿದೆ ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ದೃಷ್ಟಿಯಿಂದ ಶೀಘ್ರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
ಒಟ್ಟಾರೆ ಏನೇ ಆಗಲಿ ಇನ್ನೂ ಗೊಂದಲ ಗೊಂದಲ ಅತ್ತ ಅವರಿಗೂ ಗೊಂದಲ ಇತ್ತ ಪರೀಕ್ಷೆ ಏನಾಗುತ್ತದೆ ಏನೋ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಕಾಡು ತ್ತಿದೆ.