ಬೆಂಗಳೂರು –
ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಕುರುಬ ಸಮಾಜದ ಕುರಿಗಾಯಿ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು ಈ ವಿಷಯಕ್ಕೆ ಸಂಬಂಧಿಸಿ ದಂತೆ ಪೂಜ್ಯ ಕಾಗಿನೆಲೆ ಶ್ರೀಗಳು ಹಾಗೂ ಸಚಿವರಾದ ಕೆ ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ಸಿ.ಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೊಲೆಯಾದ ಹೆಣ್ಣು ಮಗಳ ಕುಟುಂಬಕ್ಕೆ ಸಿ.ಎಂ ಬೊಮ್ಮಾಯಿ ಅವರು 5ಲಕ್ಷ ರೂ ಪರಿಹಾರದ ಹಣ ಘೋಷಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ಸಂಸದ ಕೆ.ವಿರುಪಾಕ್ಷಪ್ಪನವರು, ಶರಣು ತಳ್ಳುಕೇರಿ,ಯುವ ನಾಯಕ ಆನೇಕಲ್ ದೊಡ್ಡಯ್ಯ ನವರು ಜೊತೆಗಿದ್ದರು.