ಚಾಮರಾಜನಗರ –
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.ಸೇವೆ ಖಾಯಂ ಗೆ ಆಗ್ರಹಿಸಿ, ತರಗತಿ ಬಹಿಷ್ಕರಿಸಿ 25ನೇ ದಿನವೂ ಜಿಲ್ಲಾಡ ಳಿತ ಭವನದ ಎದುರು ಪ್ರತಿಭಟನೆ ಮುಂದುವರೆಸಿರುವ ಅತಿಥಿ ಉಪನ್ಯಾಸಕರುಸಚಿವ ನಾಗೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಗುರುರಾಜು ಯರಗನಹಳ್ಳಿ ಮಾತನಾಡಿ ಶಿಕ್ಷಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಅಧಿಕಾರಿ ಗಳಿಗೆ ಶಿಕ್ಷಣ ಸಚಿವರು ಪಾಠ ಮಾಡುತ್ತಾರೆ.ಆದರೆ ಅಧ್ಯಾ ಪಕರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಮೊದಲು ಅವರು ಕಲಿಯಬೇಕಾಗುತ್ತದೆ ಎಂದರು.
ಶಿಕ್ಷಕರನ್ನು ಗೌರವಿಸದವರು ಶಿಕ್ಷಣ ಸಚಿವರಾಗಿರುವುದು ನಿಜಕ್ಕೂ ದುರಂತ.ಅತಿಥಿ ಉಪನ್ಯಾಸಕರು ಸರ್ಕಾರದ ಆಹ್ವಾನದ ಮೇರೆಗೆ ಕಾಲೇಜುಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ದುಡಿಯುತ್ತಿದ್ದಾರೆ.ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ 20 ವರ್ಷಗಳಿಂದಲೂ ಸರ್ಕಾರ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರಿಸಿ ಕೊಂಡು ಬಂದಿದೆ. ಯುಜಿಸಿ ನಿಯಮಾವಳಿಯನ್ನು ಗಾಳಿಗೆ ತೂರಿ ಅತ್ಯಂತ ಕನಿಷ್ಠ ವೇತನದಲ್ಲಿ ದುಡಿಸಿಕೊಳ್ಳು ತ್ತಿರುವುದು ಸರ್ಕಾರ ಮಾಡುತ್ತಿರುವ ಶೋಷಣೆಯಲ್ಲದೇ ಮತ್ತೇನು ಗೌರವಧನವನ್ನು ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಬಿಡುಗಡೆ ಮಾಡುವುದನ್ನು ಏನೆಂದು ಕರೆಯುವುದು ಇದೆಲ್ಲಾ ಶಿಕ್ಷಣ ಸಚಿವರಿಗೆ ಗೊತ್ತಿದ್ದರೂ ಅತಿಥಿ ಉಪನ್ಯಾಸಕರ ಹೋರಾಟ ಹಾಗೂ ನ್ಯಾಯಯುತ ಬೇಡಿಕೆ ಬಗ್ಗೆ ಕುರಿತು ಅಗೌರವ, ಅಪಹಾಸ್ಯದಿಂದ ಮಾತ ನಾಡುವುದು ಅಮಾನವೀಯ’ ಎಂದು ದೂರಿದರು. ಉಪಾಧ್ಯಕ್ಷರಾದ ಗಂಗಾಧರ,ಎಸ್.ಸುವರ್ಣ, ಜಿಲ್ಲಾ ಸಂಯೋಜಕ ಚಿಕ್ಕಸಿದ್ದಯ್ಯ,ಉಮಾಶಂಕರ್, ಕೆಂಪಣ್ಣ, ದೇವರಾಜು, ಮಧು, ದೊಡ್ಡಮ್ಮ, ಯೋಗೇಶ, ಮಹದೇವ ಕುಮಾರ್,ರೋಹಿಣಿ, ಚೇತನ್‌ಕುಮಾರ್,ನಾಗಭೂಷಣ, ಸುರೇಶ್, ರೇವಣ್ಣಸ್ವಾಮಿ,ಪದ್ಮಾವತಿ,ಸುಧಾಮಣಿ,ರಶ್ಮಿ, ರಾಜೇಂದ್ರ,ನವೀನ್,ವರದರಾಜು,ದೀಪಕ್ ವಿಲ್ಸನ್, ಮೇಗೇಶ್ ಪ್ರತಿಭಟನೆಯಲ್ಲಿದ್ದರು.