ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಇಲಾಖೆ – ಕೂಡಲೇ ಬಿಡುಗಡೆ ಮಾಡುವಂತೆ ಆದೇಶ ನೀಡಿದ ಇಲಾಖೆಯ ಆಯುಕ್ತರು…..

Suddi Sante Desk

ಬೆಂಗಳೂರು –

ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಯ ಹೆಚ್ಚುವರಿ ಪ್ರಭಾರ ನಿರ್ವಹಿಸಿದ ಸಹಶಿಕ್ಷಕರಿಗೆ ಪ್ರಭಾರಿಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಆದೇಶವನ್ನು ಮಾಡಿದೆ.ಹೌದು ಈ ಒಂದು ವಿಚಾರ ಕುರಿತು ಮಂಡ್ಯ ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಪತ್ರವನ್ನು ಬರೆದಿದ್ದರು ಇದಕ್ಕೆ ಸ್ಪಂದಿಸಿದ ಇಲಾಖೆಯ ಆಯುಕ್ತರು ಪ್ರಭಾರಿ ಭತ್ಯೆಯನ್ನು ಮಂಜೂರು ಮಾಡಿದ್ದಾರೆ

ಮೇ ತಿಂಗಳಲ್ಲಿ ಈ ಒಂದು ವಿಚಾರ ಕುರಿತು ಪತ್ರ ವನ್ನು ಬರೆದು ವಿನಂತಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಇಲಾಖೆಯ ಆಯುಕ್ತರಾದ ಅನ್ವಕುಮಾರ್ ಭತ್ಯೆಯನ್ನು ಮಂಜೂರು ಮಾಡಲು ಸೂಚಿಸಿದ್ದಾರೆ

ಈ ಭತ್ಯೆ ವಿಚಾರ ಕುರಿತು ರಾಜ್ಯದ ಎಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಆದೇಶವನ್ನು ಮಾಡಿ ಕೂಡಲೇ ಪ್ರಭಾರಿ ಭತ್ಯೆಗೆ ಅರ್ಹತೆ ಇರುವವರನ್ನು ಖಚಿತಪಡಿಸಿಕೊಂಡು ಕೆಲವೊಂದಿಷ್ಟು ಸೂಚನೆಗಳ ಮೂಲಕ ನೀಡಿ ಎಂದಿದ್ದಾರೆ

ಇದರೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಯನ್ನು ಹೆಚ್ಚುವರಿ ಪ್ರಭಾರ ನಿರ್ವಹಿಸಿದ ಸಹಶಿಕ್ಷಕರಿಗೆ ಇಲಾಖೆ ಪ್ರಭಾರಿ ಭತ್ಯೆ ಮಂಜೂರು ಮಾಡುವ ಮೂಲಕ ನೆರವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.