ಬೆಂಗಳೂರು –
ಸಾಮಾನ್ಯವಾಗಿ ಸೇವೆ ಸಲ್ಲಿಸುತ್ತಾ ಹೊದಂತೆ ಅವರಿಗೆ ಆಯಾ ಇಲಾಖೆಯಲ್ಲಿ ಭಡ್ತಿ ಪ್ರಮೋಶನ್ ಕೊಡಲಾಗುತ್ತದೆ.ಇದು ಸರ್ಕಾರದ ಎಲ್ಲಾ ಇಲಾಖೆ ಯಲ್ಲಿ ಇದು ಸರ್ವೆ ಸಾಮಾನ್ಯ.ಆದರೆ ಶಿಕ್ಷಣ ಇಲಾಖೆಯ ಶಿಕ್ಷಕರಿಗಾಗಿ ಮಾತ್ರ ಈ ಮಾತು ಅಪವಾದ ಹೌದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಳೆದ 25 ವರ್ಷಗಳಿಂದ ಕಾರ್ಯನಿರ್ವ ಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಈಗ ಹಿಂಬ ಡ್ತಿಯ ಆತಂಕ ಎದುರಾಗಿದೆ.ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಶಾಲೆ ಶಿಕ್ಷಕರೆಂದು ಪದನಾಮ ಬದಲಿ ಸಿದ ಕಾರಣದಿಂದ 80 ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ಅನ್ಯಾಯವಾಗುವ ಆತಂಕ ಎದುರಾಗಿದೆ.

2016 ಕ್ಕೆ ಮೊದಲು ನೇಮಕಾತಿಗೊಂಡ ಒಂದರಿಂದ ಏಳನೇ ತರಗತಿ ಪಾಠ ಮಾಡುವ ಪ್ರಾಥಮಿಕ ಶಾಲೆ ಶಿಕ್ಷಕರುಗಳಲ್ಲಿ ಮೂಲ ವೃಂದದ 1.60 ಲಕ್ಷ ಶಿಕ್ಷಕ ರಲ್ಲಿ 80 ಸಾವಿರಕ್ಕೂ ಅಧಿಕ ಶಿಕ್ಷಕರು ಪದವಿ ವಿದ್ಯಾ ರ್ಹತೆ ಮತ್ತು 20 ರಿಂದ 25 ವರ್ಷ ಸೇವಾನುಭವ ಹೊಂದಿದ್ದಾರೆ.

ಸೇವಾನಿರತರಾದ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಮುಂಬಡ್ತಿಗೊಳಿಸದೆ ಒಂದರಿಂದ ಐದನೇ ತರಗತಿ ಪಾಠ ಮಾಡುವ ಪ್ರಾಥಮಿಕ ಪಾಠಶಾಲೆ ಶಿಕ್ಷಕರ ವೃಂದಕ್ಕೆ ವರ್ಗೀಕರಿಸಿದ ಕಾರಣ ಹಿಂಬಡ್ತಿ ನೀಡಿದಂ ತಾಗಿದೆ.

ಇನ್ನೂ 2016 ಕ್ಕಿಂತ ಪೂರ್ವಾನ್ವಯವಾಗುವಂತೆ ಜೇಷ್ಠತೆಯೊಂದಿಗೆ ಮುಂಬಡ್ತಿ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಸೇವಾ ಅನುಭವದ ಜೊತೆಗೆ ಉನ್ನತ ಶಿಕ್ಷಣ ಪಡೆದ ಶಿಕ್ಷಕರಿಗೆ ಮುಂಬಡ್ತಿ ನೀಡಬೇಕೆಂದು ಹೇಳಲಾಗಿದೆ.ಒಟ್ಟಾರೆ ಎಲ್ಲಾ ಇಲಾಖೆಗೆ ಇಲ್ಲದ ನಿಯಮಗಳು ಕಾಯಿದೆಗಳು ಶಿಕ್ಷಣ ಇಲಾಖೆಗೆ ಅದರಲ್ಲೂ ಶಿಕ್ಷಕರಿಗೆ ಇರೊದು ದೊಡ್ಡ ದುರಂತವೇ ಸರಿ.ಈ ಹಿಂದೆ ರಾಜ್ಯದಲ್ಲಿ ಪ್ರತಿಭಟನೆ ಮಾಡಿ ಮನವಿಯನ್ನು ನೀಡಿದ್ದಾರೆ ಮತ್ತೆ ಇವೆಲ್ಲದರ ನಡುವೆ ಇಲಾಖೆ ಈ ಒಂದು ಸಮಸ್ಯೆ ಯನ್ನು ಅರಿತುಕೊಂಡ ಸರಿಪಡಿಸಿದರೆ ಒಳಿತು ಇಲ್ಲವಾದರೆ ದೊಡ್ಡ ಹೋರಾಟಕ್ಕೆ ನಾಡಿನ ಶಿಕ್ಷಕರು ಸಜ್ಜಾಗಿದ್ದಾರೆ.