ಬೆಂಗಳೂರು –
ರಾಜ್ಯದಲ್ಲಿನ ಶಿಕ್ಷಕರಿಗೆ ಮತ್ತೊಂದು ಪ್ರಮುಖವಾದ ಜವಾಬ್ದಾರಿಯನ್ನು ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಹೌದು ಏಪ್ರಿಲ್ 1 ರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯದ 12 ರಿಂದ 14 ವರ್ಷದ ಮಕ್ಕಳಿಗೆ ಶಾಲೆ ಗಳಲ್ಲಿಯೇ ಕೊರೊನಾ ಲಸಿಕೆ ಕೋರ್ಬಿವ್ಯಾಕ್ಸ್ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.ಹೀಗಾಗಿ ಮಕ್ಕಳನ್ನು ಕರೆಯಿಸುವ ಮತ್ತು ಸಂಪೂರ್ಣವಾಗಿ ಹಾಜರಾತಿಯನ್ನು ನೋಡಿಕೊಳ್ಳುವ ಹಾಗೆ ಮಾಡಿಕೊಳ್ಳೊದು ಶಿಕ್ಷಕರ ಪ್ರಮುಖವಾದ ಜವಾಬ್ದಾರಿಯಾಗಿದ್ದು ಹೀಗಾಗಿ ಈ ಒಂದು ಲಸಿಕಾ ಕಾರ್ಯಕ್ರಮಕ್ಕೆ ಶಾಲೆಗೆ ದಾಖಲಾಗಿರುವ ಮಕ್ಕಳ ನ್ನು ಬರುವಂತೆ ನೋಡಿಕೊಳ್ಳೊದು ಆಯಾ ಶಾಲಾ ಶಿಕ್ಷಕರ ಜವಾಬ್ದಾರಿಯಾಗಿದ್ದು ಇದರಿಂದಾಗಿ ಮತ್ತೊಂದು ಪ್ರಮುಖ ವಾದ ಜವಾಬ್ದಾರಿಯನ್ನು ಇಲಾಖೆ ಶಿಕ್ಷಕರಿಗೆ ನೀಡಲು ಮುಂದಾಗಿದೆ.
ಈ ಕುರಿತಂತೆ ಇಲಾಖೆಯಿಂದ ಅಧಿಕೃತವಾದ ಸೂಚನೆ ಹೊರಬೀಳಲಿದೆ,12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್ 16 ರಿಂದ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದ್ದು, ಸದ್ಯ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿದೆ.ರಾಜ್ಯದಲ್ಲಿ 12 ರಿಂದ 14 ವರ್ಷ ವಯಸ್ಸಿನ 20.5 ಲಕ್ಷ ಮಕ್ಕಳಿದ್ದು, ಈವರೆಗೆ 5.3 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ.ಇನ್ನು ಉಳಿದ ಮಕ್ಕಳಿಗೆ ಲಸಿಕೆ ನೀಡಲು ಲಸಿಕಾ ಅಭಿಯಾನ ಹಮ್ಮಿಕೊಳ್ಳಲು ಕೇಂದ್ರ ಆರೋಗ್ಯ ಇಲಾಖೆ ನಿರ್ಧಾರ ಕೈಗೊಂಡಿದ್ದು, 2010 ರ ಮಾರ್ಚ್ 28 ಅಥವಾ ಅದಕ್ಕೂ ಮುನ್ನ ಜನಿಸಿರುವ 12 ರಿಂದ 14 ವರ್ಷದ ಮಕ್ಕಳು ಕೋರ್ಬಿವ್ಯಾಕ್ಸ್ ಲಸಿಕೆಗೆ ಅರ್ಹರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.