ಬೆಂಗಳೂರು –
ರಾಜ್ಯದಲ್ಲಿ ಸಂಪೂರ್ಣವಾಗಿ ಶಾಲೆಗಳು ಆರಂಭಗೊಂಡ ಹಿನ್ನಲೆಯಲ್ಲಿ ಈಗಾಗಲೇ ಬೇರೆ ಇಲಾಖೆಗೆ ನಿಯೋಜನೆ ಗೊಂಡಿರುವ ಶಿಕ್ಷಕರು ಈ ಕೂಡಲೇ ಮಾತೃ ಇಲಾಖೆಗೆ ಬರುವಂತೆ ಎರಡು ಬಾರಿ ಇಲಾಖೆಯ ಆಯುಕ್ತರು ಖಡಕ್ ಆದೇಶವನ್ನು ಮಾಡಿದ್ದಾರೆ.ಆದರೂ ಅನ್ಯ ಇಲಾಖೆಗೆ ನಿಯೋಜನೆಗೊಂಡವರು ಬರಲು ಹಿಂದೇಟು ಹಾಕುತ್ತಿದ್ದು
ಅನ್ಯ ಇಲಾಖೆಗೆ ನಿಯೋಜನೆಗೊಂಡು ಮರಳಿ ಮಾತೃ ಇಲಾಖೆಗೆ ಬರಲೊಪ್ಪದ ಶಿಕ್ಷಕರನ್ನು ಕಡ್ಡಾಯವಾಗಿ ಕರೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದ್ದು
ಇದಕ್ಕಾಗಿ ಕಠಿಣ ಕ್ರಮದೊಂದಿಗೆ ಶಿಸ್ತಿನ ಕ್ರಮವನ್ನು ಕೈಗೊ ಳ್ಳಲು ಮುಂದಾಗಿದೆ.
ಇಷ್ಟು ದಿನ ಮಕ್ಕಳನ್ನು ಶಾಲೆಗೆ ಕರೆತರಲು ಮರಳಿ ಬಾ ಶಾಲೆಗೆ ಎನ್ನುತ್ತಿದ್ದ ಇಲಾಖೆ ಈಗ ಅನ್ಯ ಇಲಾಖೆಗೆ ಹೋದ ಶಿಕ್ಷಕರನ್ನು ಕರೆತರಲು ಶಾಲೆಗೆ ಮರಳಿ ಬಾ ಶಿಕ್ಷಕ ಎಂದರು ಬರುತ್ತಿಲ್ಲ.ಹೀಗಾಗಿ ಜಿಲ್ಲಾ ಉಪ ನಿರ್ದೇಶಕರ ವಿರುದ್ಧವೂ ಶಿಸ್ತು ಕ್ರಮವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ ಇಲಾಖೆಯ ಆಯುಕ್ತರು ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಸಮಸ್ಯೆ ನಡುವೆಯೂ ಶಿಕ್ಷಣ ಇಲಾಖೆಯಿಂದ ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡ ಶಿಕ್ಷಕರು ಮರಳಿ ಮಾತೃ ಇಲಾಖೆಗೆ ಬರಲು ಮನಸ್ಸು ಮಾಡದೆ ಇರುವುದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಹಲವು ವರ್ಷಗಳ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬೇಕು.ಅನ್ಯ ಇಲಾಖೆಗೆ ನಿಯೋಜನೆಗೊಂಡ ಎಲ್ಲಾ ಶಿಕ್ಷಕ ರನ್ನೂ ಪ್ರಸಕ್ತ ಮಾರ್ಚ್ ಅಂತ್ಯಕ್ಕೆ ಮರಳಿ ಮಾತೃ ಇಲಾಖೆಗೆ ಕರೆತರಲು ಇಲಾಖೆ ಪಣ ತೊಟ್ಟಿದೆ.
ಈ ಹೊಣೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶ ಕರ ಹೆಗಲಿಗೆ ಹೊರಿಸಿದೆ.ಈ ಜವಾಬ್ದಾರಿ ನಿರ್ವಹಿಸಲು ವಿಫಲರಾದರೆ ಎಲ್ಲ ಶಿಕ್ಷಕರ ಸೇವೆಯನ್ನು ಮಕ್ಕಳ ಶಿಕ್ಷಣ ಕ್ಕಾಗಿಯೇ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.ಇಲಾಖೆಗೆ ನೇಮಕ ಉಪನಿರ್ದೇಶಕರ ಮೇಲೂ ಕ್ರಮ ಕೈಗೊಳ್ಳಲು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಈಗ ಅವರನ್ನು ಕಡ್ಡಾಯವಾಗಿ ಕರೆತರುವ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಉಪನಿರ್ದೇಶಕರಿಗೆ ವಹಿಸಿದೆ.
ಇನ್ನೂ ಉಪನಿರ್ದೇಶಕರು ಒಂದು ವೇಳೆ ನಿಯೋಜಿತ ಶಿಕ್ಷಕರನ್ನು ಮರಳಿ ಇಲಾಖೆಗೆ ಕರೆತರಲು ವಿಫಲರಾದರೆ ಕರ್ತವ್ಯ ನಿರ್ಲಕ್ಷ್ಯ ಎಂದು ಪರಿಗಣಿಸಿಶಿಕ್ಷಕರ ಅನ್ಯ ಇಲಾಖೆ ಯ ನಿಯೋಜನೆಯನ್ನು ಶಿಕ್ಷಣ ಇಲಾಖೆ ಈಗಾಗಲೇ ರದ್ದುಪಡಿಸಿದ್ದು ಈ ಕುರಿತು ಜಿಪಂ ಸಿಇಒ ಗಳಿಗೂ ಸೂಚಿಸಿದೆ ಆದರೂ ಅನೇಕರು ಮರಳಿ ಶಿಕ್ಷಣ ಇಲಾಖೆಗೆ ಬರಲು ಹಿಂದೇಟು ಹಾಕಿದರೆ ಉಪನಿರ್ದೇಶಕರ ವಿರು ದ್ಧವೇ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.ಉತ್ತರ ಕರ್ನಾಟಕದಲ್ಲೇ ಹೆಚ್ಚು ನಿಯೋಜನೆಗೊಂಡ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದ ಜಿಲ್ಲೆಗಳ ಲ್ಲಿಯೇ ಅಧಿಕವಾಗಿದೆ.ಶಿಕ್ಷಕರನ್ನು ಅನ್ಯ ಇಲಾಖೆಗಳಿಗೆ ನಿಯೋಜನೆ ಮಾಡಿರುವುದು ವಿದ್ಯಾರ್ಥಿಗಳ ವಿದ್ಯಾಭ್ಯಾ ಸಕ್ಕೆ, ಶೈಕ್ಷಣಿಕ ಬೆಳವಣಿಗೆಗೆ ಭಾರೀ ಹಿನ್ನಡೆಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ನೇಮಕ ಗೊಂಡ ನೂರಾರು ಶಿಕ್ಷಕರು ಬೇರೆ ಬೇರೆ ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ.