ಬೆಂಗಳೂರು –
ಈಗಾಗಲೇ ಬಿಡುವಿಲ್ಲದೇ ಕೆಲಸ ಕಾರ್ಯಗಳ ನಡುವೆ ಸದಾ ಶಾಲೆಯಲ್ಲಿ ಬ್ಯೂಜಿಯಾಗಿರುತ್ತಿರುವ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ನೀಡಿದೆ. ಹೌದು ಮಧ್ಯಾಹ್ನ ಉಪಹಾರ ಯೋಜನೆಯಡಿ ಯಲ್ಲಿ ಆಹಾರ ಭತ್ಯೆಯ ಪರಿವರ್ತನಾ ವೆಚ್ಚದ ನಗದು ಮೊಬಲಗನ್ನು ಅರ್ಹ ಶಾಲೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆನೇರವಾಗಿ ಜಮೆ ಮಾಡುವ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ವನ್ನು ಮಾಡಿದೆ.

ಹೀಗಾಗಿ ಈ ಒಂದು ಆದೇಶದಿಂದಾಗಿ ಸಧ್ಯ ರಾಜ್ಯದ ಎಲ್ಲಾ ಶಾಲೆಯಲ್ಲಿ ಅರ್ಹ ಫಲಾನುಭವಿ ವಿದ್ಯಾರ್ಥಿ ಗಳ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಇಲಾಖೆಯ ಸ್ಯಾಟ್ಸ್ ತಂತ್ರಾಂಶದಲ್ಲಿ ಇಂದಿಕರಿಸಲು ಸೂಚನೆಯನ್ನು ನೀಡಿದೆ ಇದರೊಂದಿಗೆ ಖಾತೆ ಇಲ್ಲದ ವಿದ್ಯಾರ್ಥಿಗಳ ಶೂನ್ಯ ಬ್ಯಾಂಕ್ ಖಾತೆಯನ್ನು ಸಮೀಪದ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಇಲ್ಲವೇ ಅಂಚೆ ಕಚೇರಿಗಳಲ್ಲಿ ತೆರೆಯಲು ಸೂಕ್ತವಾದ ನಿರ್ದೇಶವನ್ನು ನೀಡವಂತೆ ಇಲಾಖೆಯ ಆಯುಕ್ತರು ಸೂಚನೆಯನ್ನು ನೀಡಿದ್ದಾರೆ


ಈಗಾಗಲೇ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಶಿಕ್ಷಕರಿಗೆ ಇಲಾಖೆ ಈಗ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ನೀಡಿದೆ. ಬಿಸಿಯೂಟದ ಅಡುಗೆಯ ಪರಿವರ್ತನಾ ವೆಚ್ಚವನ್ನು ನೇರವಾಗಿ ಮಕ್ಕಳ ಬ್ಯಾಂಕ್ ಖಾತೆಗೆ ಜಮೆ ಮಾಡಲು ರಾಜ್ಯದ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬ್ಯಾಂಕ್ ಖಾತೆ ಹೊಂದದೇ ಇರುವ ಮಕ್ಕಳ ಖಾತೆ ತೆರೆದು ಮಾಹಿತಿ ನೀಡುವಂತೆ ಸೂಚನೆಯನ್ನು ಇಲಾಖೆಯ ಆಯುಕ್ತರು ನೀಡಿದ್ದು ಹೀಗಾಗಿ ಮತ್ತೊಂದು ಜವಾಬ್ದಾರಿ ಶಿಕ್ಷಕರಿಗೆ ಬಂದಿದೆ.