ಬೆಂಗಳೂರು –
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆಗೆ ನಿರ್ಧಾರ ಮಾಡಲು ರಾಜ್ಯ ಮುಂದಾಗಿದೆ. ಹೌದು ನೈತಿಕ ಪಾಠದ ಅಡಿಯಲ್ಲಿ ಭಗವದ್ಗೀತೆ ಪಠ್ಯ ಜಾರಿಗೆ ತರಲು ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ವರ್ಷ ದಿಂದ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂ ದಲೇ ಭಗವದ್ಗೀತೆಯನ್ನು ಎಲ್ಲಾ ಶಾಲೆಗಳಲ್ಲಿ ವಾರದಲ್ಲಿ ಒಂದು ದಿನ ಮಕ್ಕಳಿಗೆ ಪಾಠ ಮಾಡಲಾಗುತ್ತದೆ.ಈಗಾಗಲೇ ಗುಜರಾತ್ ನಲ್ಲಿ 6 ರಿಂದ 8 ನೇ ತರಗತಿಯ ವಿದ್ಯಾರ್ಥಿ ಗಳಿಗೆ ಭಗವದ್ಗೀತೆಯ ಭೋಧನೆಯ ಕಾರ್ಯ ನಡೆಯು ತ್ತಿದ್ದು ಅಲ್ಲಿನ ಹಾಗೇ ಇಲ್ಲಿ ಕೂಡ ಭೋದನೆ ಮಾಡಲು ರಾಜ್ಯ ಸರ್ಕಾರ ಮುಂದಾ ಗಿದೆ.ಇನ್ನೂ ಒಂದು ಕಡೆಗೆ ಈಗಾ ಗಲೇ ಮೊಟ್ಟೆ, ಬಾಳೆ ಹಣ್ಣು, ಹಿಜಾಬ್ ವಿವಾದಲ್ಲಿ ರಾಜ್ಯದ ಶಿಕ್ಷಣ ಇಲಾಖೆಯ ವಿವಾದದಲ್ಲಿ ಇದ್ದು ಮುಂದೆ ಭಗವದ್ಗೀತೆಯ ಭೋಧನೆಯ ಕಾರ್ಯ ಯಾವ ವಿವಾದಕ್ಕೆ ತಿರುಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.























