ಬೆಂಗಳೂರು –
ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳಿಗೆ ಶುಭ ಸುದ್ದಿಯೊಂನ್ನು ರಾಜ್ಯ ಸರ್ಕಾರ ನೀಡಿದೆ.ಹೌದು ಅಭಿವೃದ್ಧಿ ಪಡಿಸಲು ಅಧ್ಯಯನ ನಡೆಸಿ ವರದಿ ನೀಡುವಂತೆ ಜಿಲ್ಲಾ ಕಾರ್ಯನಿರ್ವ ಹಣಾ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) ಪ್ರಧಾನ ಕಾರ್ಯದರ್ಶಿ (ಪಂಚಾಯತ್‌ರಾಜ್) ಉಮಾ ಮಹದೇವನ್ ಸೂಚನೆ ನೀಡಿದ್ದಾರೆ.

ಆರ್‌ಡಿಪಿಆರ್ ಅಧಿನಿಯಮದಡಿ ಗ್ರಾ.ಪಂ.ಗಳ ಕಾರ್ಯಗಳಲ್ಲಿ ಶಾಲಾಭಿವೃದ್ಧಿಯೂ ಸೇರಿದೆ. ಅಲ್ಲದೆ, ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿಯ ಲ್ಲೂ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯನ್ನು ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒದಗಿಸುವ ಶಾಸನ ಬದ್ಧ ಅನುದಾನ, ಜಲಜೀವನ್ ಮಿಷನ್ ಮಹಾತ್ಮಾ ಗಾಂಧಿ ನರೇಗಾ ಮುಂತಾದ ಯೋಜನೆಗಳ ಅನು ದಾನವನ್ನು ಶಾಲಾಭಿವೃದ್ಧಿಗೆ ಬಳಸಿಕೊಳ್ಳಬಹುದು

ಈ ಬಗ್ಗೆ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಇತ್ತೀ ಚೆಗೆ ನಡೆದ ಸಭೆಯಲ್ಲೂ ಚರ್ಚಿಸಲಾಗಿದೆ.ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಂದ ತಮ್ಮ ವ್ಯಾಪ್ತಿಯ ಶಾಲೆಗಳ ಸ್ಥಿತಿಗತಿ ಅಧ್ಯಯನ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿ ದ್ದಾರೆ.

ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಶಿಕ್ಷಣ ಕಾರ್ಯಪಡೆ ಸದಸ್ಯರು ತಮ್ಮ ಅಧಿಕಾರಿಗ ಳೊಂದಿಗೆ ಕನಿಷ್ಠ ಮೂರು ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಮಕ್ಕಳು,ಪಾಲಕರು,ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಶಾಲೆಗಳಲ್ಲಿ ಕೊರತೆ ಇರುವ ನಿವೇಶನ, ಹೊಸ ಕಟ್ಟಡ, ಕೊಠಡಿ, ಕಾಂಪೌಂಡ್ ನಿರ್ಮಾಣ,

ಅವುಗಳ ದುರಸ್ತಿ ವಿದ್ಯುತ್ ಸಂಪರ್ಕ,ಕುಡಿಯುವ ನೀರು ಸಂಪರ್ಕ,ವಾಟರ್ ಫಿಲ್ಟರ್, ಶೌಚಾಲಯ, ಕೈ ತೋಟ,ಆಟದ ಸಲಕರಣೆ, ಕುರ್ಚಿ,ಬೆಂಚು, ಟೇಬಲ್‌ಗಳು ಸೇರಿದಂತೆ ಅಗತ್ಯವಿರುವ ಎಲ್ಲ ರೀತಿಯ ಮೂಲಸೌಕರ್ಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾ ಕಾರ್ಯನಿ ರ್ವಹಣಾ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು ಮತ್ತು ಗ್ರಾ.ಪಂ ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆನೀಡಿದ್ದಾರೆ.