ಬೆಂಗಳೂರು –
ರಾಜ್ಯದಲ್ಲಿ ಹೊಸದಾಗಿ ರಚನೆಗೊಂಡ ನೂತನ ತಾಲ್ಲೂಕು ಗಳಲ್ಲಿ BEO ಕಚೇರಿ ಆರಂಭ ಮಾಡುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕರು ಮಾಹಿತಿ ಕೇಳಿದ್ದಾರೆ ರಾಜ್ಯದ ಎಲ್ಲಾ ಉಪ ನಿರ್ದೇಶಕರಿಗೆ ಪತ್ರವನ್ನು ಬರೆದು ಕಚೇರಿ ಆರಂಭ ಕುರಿತು ಸಮಗ್ರವಾದ ಒಂಬತ್ತು ಅಂಶಗಳೊಂದಿಗೆ ಮಾಹಿತಿ ಕೇಳಿದ್ದಾರೆ

ಕಚೇರಿ ಆರಂಭ ಕುರಿತು ಮಾಹಿತಿ ನೀಡಿ ಇದರೊಂದಿಗೆ ಸಧ್ಯ ರಾಜ್ಯದಲ್ಲಿ ಕರೋನ ಸಂಕಷ್ಟದ ಸಮಯದಲ್ಲಿ ಹುದ್ದೆಗಳಿಗೆ ಮಂಜೂರಾತಿ ನೀಡಲು ಹಣದ ತೊಂದರೆಯಾಗಿದ್ದು ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಸಿಬ್ಬಂದಿ ಗಳ ಮಾಹಿತಿಯನ್ನು ನೀಡಿ ಎಂದಿದ್ದಾರೆ

ಒಟ್ಟಾರೆ ರಾಜ್ಯದಲ್ಲಿ ಬಿಇಓ ಕಚೇರಿ ಆರಂಭ ಮಾಡುವ ವಿಚಾರದಲ್ಲಿ ಆರ್ಥಿಕ ಪರಿಸ್ಥಿತಿ ಸಮಸ್ಯೆಯಾಗಿದ್ದು ಇಲಾಖೆ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು


