ಬೆಂಗಳೂರು –
ಹೌದು 2002 ರಲ್ಲಿ ಸರಕಾರಿ ಶಾಲೆಗೆ ಸೇವೆಗೆ ಸೇರಿದ ಶಿಕ್ಷಕ-ಶಿಕ್ಷಕಿಯರ ವಿರುದ್ಧ ಯಾವುದಾದರೂ ಒಂದು ಪ್ರಕರಣಗಳಲ್ಲಿ ತಪ್ಪು ಮಾಡಿದಾಗ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಕ್ಷೇತ್ರ ಶಿಕ್ಷಣಾ ಧಿಕಾರಿಗೆ ಈಗ ಅಧಿಕಾರ ವನ್ನು ನೀಡಲಾಗಿದೆ. ಹೌದು ಈವರೆಗೆ ಈ ಒಂದು ವಿಶೇಷವಾದ ಅಧಿಕಾ ರವು DDPI ಅವರಿಗೆ ಇತ್ತು ಸಧ್ಯ ಅದನ್ನು ಒಂದಿ ಷ್ಟು ಮಾರ್ಪಾಡು ಮಾಡಿ ಕಾನೂನು ಕ್ರಮವನ್ನು ಕೈಗೊಳ್ಳಲು ಬಿಇಓ ಅವರಿಗೆ ನೀಡಲಾಗಿದೆ.
ಜಿಲ್ಲೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಕಾರ್ಯ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಈ ಒಂದು ಕಾರ್ಯವನ್ನು ಮಾಡಿ ಸಧ್ಯ ಬಿಇಓ ಅವರಿಗೆ ನೀಡಲಾಗಿದೆ.ಈ ಹಿಂದೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಅಧಿಕಾರ ಇತ್ತು. ಆದರೀಗ ಕ್ಷೇತ್ರ ಶಿಕ್ಷಣಾಧಿಕಾರಿಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟ ಕಾರಣ ಅಂತಿಮ ಕ್ರಮಕೈಗೊಳ್ಳಲಿದ್ದಾರೆ.