ಮೈಸೂರು –
ಶಾಲೆಗೆ ಮೊಬೈಲ್ ತಗೊದುಕೊಂಡು ಬಂದಿದ್ದ ವಿದ್ಯಾರ್ಥಿ ನಿಯೊಬ್ಬಳಿಗೆ ಬಟ್ಟೆ ಬಿಚ್ಚಿಸಿ ಶಾಲೆಯಲ್ಲಿ ಕೂಡಿಸಿದ್ದ ಮುಖ್ಯ ಶಿಕ್ಷಕಿಯನ್ನು ಅಮಾನುತು ಮಾಡುವಂತೆ ಇಲಾಖೆಯ ಉಪನಿರ್ದೇಶಕರು ಶಿಫಾರಸ್ಸು ಮಾಡಿದ್ದಾರೆ.ಹೌದು ಮಂಡ್ಯದ ಜಿಲ್ಲೆಯ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ಒಂದು ಘಟನೆ ನಡೆದಿತ್ತು.ಶಾಲೆಗೆ ವಿದ್ಯಾರ್ಥಿಯೊಬ್ಬಳು ಮರೆತು ಮೊಬೈಲ್ ತಗೆದುಕೊಂಡು ಬಂದಿದ್ದಳು ಈ ಒಂದೇ ಕಾರಣಕ್ಕೆ ಮುಖ್ಯ ಶಿಕ್ಷಕಿ ಸ್ನೇಹಲತಾ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿ ದ್ದರು ಚಳಿಗೆ ನಡುಗುವಂತೆ ಫ್ಯಾನ್ ಕೆಳಗೆ ಬರಿಮೈಯಲ್ಲಿ ಕೂರಿಸಿದ್ದ ಮುಖ್ಯಶಿಕ್ಷಕಿ ಯನ್ನು ಅಮಾನತು ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಉಪನಿರ್ದೇಶ ಕರು ಈಗ ಶಿಫಾರಸ್ಸನ್ನು ಮಾಡಿದ್ದಾರೆ.
ಡಿಸೆಂಬರ್ 22ರಂದು ಶ್ರೀರಂಗಪಟ್ಟಣ ತಾಲೂಕಿನ ಗಣಂ ಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮೊಬೈಲ್ ತಂದಿದ್ದ ಕಾರಣಕ್ಕೆ ಎಂಟನೇ ತರಗತಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿ ಮುಖ್ಯ ಶಿಕ್ಷಕಿ ಇಂಥಹ ಅಮಾನವೀಯ ಕೆಲಸ ವನ್ನು ಮಾಡಿದ್ದರು ಮೊಬೈಲ್ ತಂದವರು ಕೊಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳಿಂದ ನಿಮ್ಮನ್ನು ಚೆಕ್ ಮಾಡಿಸು ತ್ತೇನೆ ಎಂದು ಮುಖ್ಯಶಿಕ್ಷಕಿ ಬೆದರಿಕೆ ಹಾಕಿದ್ದರಂತೆ.
ಕೆಲವು ವಿದ್ಯಾರ್ಥಿನಿಯರ ಸ್ವೆಟರ್ ಬಿಚ್ಚಿಸಿದ್ದರಂತೆ ವಿದ್ಯಾರ್ಥಿನಿಯ ಸ್ಕರ್ಟ್ ಹರಿದುಹಾಕಿದ್ದಾರೆ. ಓರ್ವ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿ ಹಲ್ಲೆ ಮಾಡಿ ಚಳಿ ಆಗಲೆಂದು ಜೋರಾಗಿ ಫ್ಯಾನ್ ಹಾಕಿ ಕೆಳಗೆ ಬೆತ್ತಲೆ ಕೂರಿಸಿದ್ದರಂತೆ ಸಂಜೆವರೆಗೂ ಊಟ ನೀರು ಕೊಡದೇ ಹಾಗೆಯೇ ಕೂರಿಸಿ ದ್ದರು ಸಂಜೆ ಮನೆಗೆ ಮರಳಿದ ವಿದ್ಯಾರ್ಥಿನಿ ಪೋಷಕರಿಗೆ ಮಾಹಿತಿ ನೀಡಿದ್ದು ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಪರಿಶೀಲನೆ ನಡೆಸಿದ ಅಧಿಕಾರಿಗಳು ಹಿರಿಯ ಅಧಿಕಾರಿಗ ಳಿಗೆ ವರದಿ ಸಲ್ಲಿಸಿದ್ದು, ಮುಖ್ಯ ಶಿಕ್ಷಕಿ ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ.ಇನ್ನೂ ಇತ್ತ ಈ ಎಲ್ಲಾ ವಿಚಾರ ಕುರಿತಂತೆ ಸುದ್ದಿ ಸಂತೆ ವರದಿಯನ್ನು ಮಾಡಿತ್ತು ಹಾಗೇ ಮುಖ್ಯ ಶಿಕ್ಷಕಿ ಕೂಡಾ ತಪ್ಪನ್ನು ಒಪ್ಪಿಕೊಳ್ಳದೇ ತುಂಬಾ ಕೆಟ್ಟದಾಗಿ ವರ್ತನೆ ಮಾಡಿದ್ದರು ಇದೇಲ್ಲ ವಿಚಾರ ವನ್ನು ಸುದ್ದಿ ಸಂತೆ ವರದಿ ಮಾಡಿತ್ತು ಹಾಗೇ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು ಎಲ್ಲಾ ಘಟನೆಯಿಂ ದಾಗಿ ಎಚ್ಚೇತ್ತುಕೊಂಡ ಇಲಾಖೆಯ ಅಧಿಕಾರಿಗಳು ಈಗ ಶಿಕ್ಷಕಿಗೆ ಶಿಕ್ಷೆ ಕೊಡಲು ಶಿಫಾರಸ್ಸನ್ನು ಮಾಡಿದ್ದಾರೆ.