ಶಿವಮೊಗ್ಗ –
ಕರ್ತವ್ಯ ನಿರತ ಉಪ ತಹಶೀಲ್ದಾರ್ ರೊಬ್ಬರು ಹೃದಯಾ ಘಾತದಿಂದ ನಿಧನರಾದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ ಚನ್ನಕೇಶವ(46)ಹೃದಯಾಘಾತದಿಂದ ಇಂದು ಕಚೇರಿಯ ಲ್ಲಿಯೇ ಮೃತಪಟ್ಟ ಅಧಿಕಾರಿಯಾಗಿದ್ದಾರೆ.

ಹೌದು ಸೊರಬ ತಾಲೂಕಿನ ಆನವಟ್ಟಿ ನಾಡಕಚೇರಿಯ ಕರ್ತವ್ಯನಿರತ ಉಪ ತಹಶೀಲ್ದಾರ್ ಚನ್ನಕೇಶವ (46) ಹೃದಯಾಘಾತದಿಂದ ಇಂದು ಕಚೇರಿಯಲ್ಲಿಯೇ ಮೃತ ಪಟ್ಟಿದ್ದಾರೆ.ಚನ್ನಕೇಶವ ಅವರಿಗೆ ಕರ್ತವ್ಯದಲ್ಲಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು.ತಕ್ಷಣವೇ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಚಿಕಿತ್ಸೆ ಸ್ಪಂದಿಸ ದೇ ಮೃತಪಟ್ಟಿದ್ದಾರೆ.

ಸಾಗರದ ಶ್ರೀಧರ ನಗರ ನಿವಾಸಿಯಾಗಿದ್ದ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.1998ರಲ್ಲಿ ಗ್ರಾಮ ಲೆಕ್ಕಿಗರಾಗಿ ಕಂದಾಯ ಇಲಾಖೆಗೆ ಸೇರ್ಪಡೆಯಾಗಿದ್ದ ಚನ್ನಕೇಶವ ವಿವಿಧ ಹಂತದ ಪದೋನ್ನತಿ ಹೊಂದಿ ಉಪ ತಹಶೀಲ್ದಾರರಾಗಿದ್ದರು. ಸೊರಬ ಪಟ್ಟಣದ ತಾಲೂಕು ಕಚೇರಿಯಲ್ಲಿ ಶಿರಸ್ತೇದಾ ರರಾಗಿ ಸಹ ಕರ್ತವ್ಯ ಸಲ್ಲಿಸಿದ್ದರು.ಇನ್ನೂ ಮೃತರಾದ ಚನ್ನಕೇಶವ ಅವರ ನಿಧನಕ್ಕೆ ರಾಜ್ಯದ ಸರ್ಕಾರಿ ನೌಕರರ ಸಂಘ,ಕಂದಾಯ ಇಲಾಖೆಯ ನೌಕರರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಸಂತಾಪ ಸೂಚಿಸಿದ್ದಾರೆ.