ಬೆಂಗಳೂರು –
ಸಿಡಿ ಲೇಡಿ ಕೊನೆಗೂ ಪ್ರತ್ಯಕ್ಷವಾಗಿದ್ದಾಳೆ ನ್ಯಾಯಾಧೀಶರ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲು ಮಾಡಿದ್ದು ಸಿಡಿ ಲೇಡಿಯನ್ನು ವಿಚಾರಣೆಗಾಗಿ ಆಡುಗೋಡಿಯ ಟೆಕ್ನಿಕಲ್ ಸೆಲ್ ಗೆ ಎಸ್ ಐಟಿ ಅಧಿಕಾರಿಗಳು ಕರೆದೊಯ್ದಿದ್ದು ಇನ್ನೂ ಅಧಿಕಾರಿಗಳು ಸಿಡಿ ಲೇಡಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

‘ಸಿಡಿ’ ಲೇಡಿಗೆ ಎಸ್ ಐ ಟಿ ಅಧಿಕಾರಿಗಳ ಪ್ರಶ್ನೆ..?
ಪ್ರಶ್ನೆ 1 ಯಾವ ವಿಚಾರವಾಗಿ ರಮೇಶ್ ಜಾರಕಿಹೊಳಿಯನ್ನು ಸಂಪರ್ಕಿಸಿದ್ರಿ..?
2) ಅತ್ಯಾಚಾರ ಎನ್ನುವುದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾಕೆ..?
3) ವಿಡಿಯೋದಲ್ಲಿದ್ದ ಯುವತಿ ನಾನಲ್ಲ ಎನ್ನಲು ಕಾರಣವೇನು
4) ಗೊಂದಲ ಮೂಡಿಸುವ ಹೇಳಿಕೆಗಳನ್ನು ನೀಡಲು ಕಾರಣವೇನು..? ಯಾವುದಾದರೂ ಒತ್ತಡಗಳಿದ್ವಾ..?
5) ಬೆದರಿಕೆ ಇದೆ ಎಂದು ಹೇಳಿದ್ದೀರಿ..? ಯಾರಿಂದ ನಿಮಗೆ ಬೆದರಿಕೆಯಿದೆ..?

ವಿಚಾರಣೆ ವೇಳೆ ಸಿಡಿ ಲೇಡಿ SIT ಅಧಿಕಾರಿಗಳ ಮುಂದೆ ಹಲವು ವಿಷಯಗಳನ್ನು ಬಹಿರಂಗಪಡಿಸಿ ದ್ದಾರೆ. ವಿಚಾರಣೆ ವೇಳೆ ಮಾತನಾಡಿದ ಸಿಡಿ ಲೇಡಿ ‘ ನನ್ನನ್ನು ಯಾರೂ ಕೂಡ ಕಿಡ್ನಾಪ್ ಮಾಡಿರಲಿಲ್ಲ, ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ ನನಗೆ ಬೆದರಿಕೆ ಒಡ್ಡಲಾಗಿದೆ. ರಮೇಶ್ ಜಾರಕಿಹೊಳಿ ಯಿಂದ ನನಗೆ ಬೆದರಿಕೆ ಇದ್ದ ಹಿನ್ನೆಲೆ ನಾನು ತಲೆಮರೆಸಿಕೊಂಡಿದ್ದೆ ಎಂದು ಸಂತ್ರಸ್ತೆ ಹೇಳಿದ್ದಾರೆ ಎನ್ನಲಾಗಿದೆ.

ನನ್ನ ತಂದೆ, ತಾಯಿ, ಸೋದರ ಕೂಡ ರಮೇಶ್ ಜಾರಕಿಹೊಳಿ ಹಿಡಿತದಲ್ಲಿದ್ದಾರೆ, ನನ್ನ ತಂದೆ, ತಾಯಿ ಸೋದರನಿಗೂ ರಕ್ಷಣೆ ಕೊಡಬೇಕು ಎಂದು ಅಧಿಕಾ ರಿಗಳ ಬಳಿ ಸಂತ್ರಸ್ತೆ ಮನವಿ ಮಾಡಿದ್ದಾರೆ. ಇನ್ನೂ, ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ತಮಗೆ ಕೊಟ್ಟ ಗಿಫ್ಟ್, ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಚಾಟಿಂಗ್, ವಿಡಿಯೋ ಮೊಬೈಲ್ ಸಂದೇಶಗಳನ್ನು ಎಸ್ ಐ ಟಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

ಇನ್ನೂ, ಮೆಡಿಕಲ್ ಟೆಸ್ಟ್ ನಡೆಸುವವರೆಗೂ ನೀವು ನಮ್ಮ ರಕ್ಷಣೆಯಲ್ಲಿರಬೇಕು, ನಿಮ್ಮ ರಕ್ಷಣೆಗೆ 8 ಮಹಿಳಾ ಪೊಲೀಸರ ತಂಡ ನಿಯೋಜನೆ ಮಾಡಲಾ ಗಿದೆ. ನಿಮಗೆ ರಕ್ಷಣೆ ನೀಡಲಿದ್ದೇವೆ. ನೀವು ಬಯಸಿ ದ್ರೆ ಮಹಿಳಾ ಸಾಂತ್ವನ ಕೇಂದ್ರದಲ್ಲಿರಬಹುದು. ವೈದ್ಯಕೀಯ ಪರೀಕ್ಷೆ ಮುಗಿಯುವವರೆಗೂ ನಮ್ಮ ರಕ್ಷಣೆಯಲ್ಲಿರಬೇಕು ಎಂದು SIT ಅಧಿಕಾರಿಗಳು ಸಿಡಿ ಲೇಡಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದಂತೆ ಸಿಡಿ ಸಂತ್ರಸ್ತ ಯುವತಿ, ಎಸ್‌ಐಟಿ ಕೋರಿಕೆಯ ಮೇರೆಗೆ ಆಡುಗೋಡಿಯ ಟೆಕ್ನಿಕಲ್ ಸೆಲ್ ಗೆ ವಿಚಾರಣೆಗೆ ಹಾಜರಾದರು. ಇಂತಹ ಸಿಡಿ ಸಂತ್ರಸ್ತೆಯ ವಿಚಾರಣೆ ಈಗ ಮುಕ್ತಾಯಗೊಂಡಿದ್ದು, ನಾಳೆ ಮತ್ತೆ ವಿಚಾರಣೆ ಗೆ ಹಾಜರಾಗುವಂತೆ ಸಂತ್ರಸ್ತ ಯುವತಿಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.