ಚಿಕ್ಕಮಗಳೂರು –
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ನವೊದಯಾ ವಿದ್ಯಾಲಯದಲ್ಲಿ ಕೋವಿಡ್ ಸ್ಫೋಟಗೊಂ ಡಿದ್ದು ಸಧ್ಯ ಮೂರು ದಿನದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಸೇರಿದಂತೆ ಶಾಲೆಯ 67 ಮಂದಿಯಲ್ಲಿ ಕೋವಿಡ್ ಸೋಂಕು ದೃಢವಾಗಿದ್ದು ಇದರ ಬೆನ್ನಲ್ಲೇ ಶಾಲೆಯನ್ನು ಸಧ್ಯ ಸೀಲ್ ಡೌನ್ ಮಾಡಲಾಗಿದೆ.
ಹೌದು 60 ವಿದ್ಯಾರ್ಥಿಗಳು 3 ಶಿಕ್ಷಕರು,4 ಮಂದಿ ಸಿಬ್ಬಂದಿ ಯಲ್ಲಿ ಸೋಂಕು ದೃಢಪಟ್ಟಿದೆ.ಬಾಳೆಹೊನ್ನೂರು ಸಮೀ ಪದ ಸಿಗೋಡುನಲ್ಲಿರುವ ವಸತಿ ಶಾಲೆಯಲ್ಲಿ ಮೊದಲು ಶಿಕ್ಷಕರಿಗೊಬ್ಬರಿಗೆ ಕೋವಿಡ್ ಕಾಣಿಸಿಕೊಂಡಿತ್ತು.ನಂತರ ಆರೋಗ್ಯ ಇಲಾಖೆಯು 418 ವಿಧ್ಯಾರ್ಥಿಗಳು, ಸಿಬ್ಬಂದಿ ಗಳ ಸ್ವ್ಯಾಬ್ ಪಡೆದು ತಪಾಸಣೆ ನಡೆಸಲಾಗಿದೆ
ಈ ವೇಳೆ 67 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಮುಂಜಾಗೃತೆಯ ಹಿನ್ನಲೆಯಲ್ಲಿ ಜವಾಹರ್ ನವೋದಯ ವಿದ್ಯಾಲಯವನ್ನು ಜಿಲ್ಲಾಡಳಿತವು ಸೀಲ್ ಡೌನ್ ಮಾಡಿ ದ್ದು ಮುಂಜಾಗೃತೆ ಕ್ರಮ ಕೈಗೊಂಡಿದೆ.ಇನ್ನೂ ಕೋವಿಡ್ ಸೋಂಕು ಪತ್ತೆಯಾದವರಲ್ಲಿ ಯಾವುದೇ ಲಕ್ಷಣಗಳಿಲ್ಲ ಸ್ವ್ಯಾಬ್ ಟೆಸ್ಟ್ ವೇಳೆ ಸೋಂಕು ದೃಡಪಟ್ಟಿದೆ. ಸೋಂಕಿತ ರನ್ನು ವಸತಿ ಶಾಲೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ ಈಗಾಗಲೇ ಸ್ಥಳಕ್ಕೆ ಡಿ.ಎಚ್.ಓ, ಡಾ.ಉಮೇಶ್, ಸರ್ವೇಕ್ಷ ಣಾಧಿಕಾರಿ ಡಾ.ಮಂಜುನಾಥ್,ಆರೋಗ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳ ನಿಯೋಜನೆ ಮಾಡಿದ್ದ ಜವಾಹರ್ ನವೋದಯ ವಿದ್ಯಾಲ ಯವನ್ನು ಜಿಲ್ಲಾಡಳಿತವು ಸೀಲ್ ಡೌನ್ ಮಾಡಿದ್ದು ಮುಂಜಾಗ್ರತಾ ಕ್ರಮ ಕೈಗೊಂಡಿದೆ