ವಿಜಯಪುರ –
ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡುವ ಮೂಲಕ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಕ್ಕಳೊಂದಿಗೆ ಕಾಲ ಕಳೆದರು.
ಜಿಲ್ಲೆಯ ಚಡಚಣ ತಾಲೂಕಿನ ಜಿಗಜೀವಣಿಗಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮೊದಲು ಶಾಲೆಗೆ ಭೇಟಿ ನೀಡಿದರು.ಇದೇ ವೇಳೆ ಪಾಠ ಮಾಡಿ ಮಕ್ಕಳಿಗೆ ತಿಳಿ ಹೇಳಿದರು.ಈ ಬಳಿಕ ಗ್ರಾಮದಲ್ಲಿ ರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.