ಮಂಗಳೂರು –
ಮಕ್ಕಳಿಗೆ ಬೇಸಿಗೆ ರಜೆ ಎಂದರೆ ಎಲ್ಲಿಲ್ಲದ ಖುಷಿ. ಶಾಲೆ ಗಳು ರಜೆ ಇರುವ ಸಂದರ್ಭದಲ್ಲಿ ತಮ್ಮ ನೆಚ್ಚಿನ ಜಾಗಗಳಿಗೆ ಹೋಗಿ ಸಂತೋಷ ಪಡುತ್ತಾರೆ.ಆದರೆ, ಇನ್ನೂ ಕೆಲವರಿಗೆ ಆ ಭಾಗ್ಯ ಇರುವುದಿಲ್ಲ.ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಂತಹ ಮಕ್ಕಳಿಗೂ ಸಹ ಪ್ರೀತಿ ಹಂಚಿ ಮೆಚ್ಚುಗೆಗೆ ಪಾತ್ರ ಆಗಿದ್ದಾರೆ.ಹೌದು ತಾವೊಬ್ಬ ಜಿಲ್ಲಾಧಿಕಾರಿ ಎನ್ನೊದನ್ನು ಮರೆತ ಇವರು ಪ್ರವಾಸಕ್ಕೆ ಅನುಮತಿ ಕೇಳಲು ಬಂದ ವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ರಜೆಗೆ ರಂಗು ತುಂಬಿದ್ದಾರೆ

ಹೌದು ಮಕ್ಕಳೊಂದಿಗೆ ಭೋಜನ ಮಾಡಿದ ಡಿಸಿ ಶಾಲಾ ಮಕ್ಕಳು ರಜೆಯ ಮಜಾ ಅನುಭವಿಸುತ್ತಿದ್ದಾರೆ.ಹಲವರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ರೆ ಇನ್ನೂ ಹಲವರು ಅಜ್ಜನ ಮನೆ,ಕಾಡು,ತೋಟ ಎಂದು ಬಾಲ್ಯವನ್ನು ಅಸ್ವಾದಿ ಸುತ್ತಿದ್ದಾರೆ.ಆದರೆ ಇದೆಲ್ಲದವರಿಂದ ವಂಚಿತರಾದ ಅನಾಥ ಮಕ್ಕಳು ಮಾತ್ರ ತಮ್ಮನ್ನು ಯಾರೂ ಕರೆದುಹೋಗುವವ ರಿಲ್ಲದೇ ಅನಾಥರನ್ನಾಗಿ ಮಾಡಿದ ದೇವರಿಗೆ ಶಪಿಸುತ್ತಾ ದಿನ ಕಳೆಯುತ್ತಿದ್ದಾರೆ.ಆದರೆ ಮಂಗಳೂರು ನಗರದ ಬೋಂದೆಲ್‌ನ ಬಾಲಮಂದಿರದಲ್ಲಿ ಆಶ್ರಯ ಪಡೆದಿರುವ ಒಟ್ಟು 13 ಅನಾಥ ಮಕ್ಕಳಿಗೆ ಮಾತ್ರ ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಡಾ.ರಾಜೇಂದ್ರ ಕೆವಿ ಪ್ರೀತಿಯ ಧಾರೆಯೆರೆದಿದ್ದಾರೆ. ಒಂದು ದಿನ ಮಕ್ಕಳೊಂದಿಗೆ ಆಡಿ ಬೆರೆತು ಸಹಭೋಜನ ಮಾಡಿ ನಿಮ್ಮೊಂದಿಗೆ ನಾನಿದ್ದೇನೆ ಅಂತಾ ಧೈರ್ಯ ತುಂಬಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಯ 13 ಮಕ್ಕಳು ವಿದ್ಯಾಭ್ಯಾಸ,ರಕ್ಷಣೆ ಹಾಗೂ ಪೋಷಣೆಗಾಗಿ ಬೊಂದೇಲ್ ನ ಬಾಲಕರ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿ ಮಕ್ಕಳು 6 ರಿಂದ 17 ವರ್ಷದ ಮಕ್ಕಳಿದ್ದು ರಜೆಯ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗು ವವರು ಯಾರೂ ಇರುವುದಿಲ್ಲ.ಆದ್ದರಿಂದ ಅವರು ಬಾಲ ಮಂದಿರದಲ್ಲೇ ಉಳಿದಿರುತ್ತಾರೆ.


ಮಕ್ಕಳ ಮನರಂಜನೆಗಾಗಿ ಪ್ರವಾಸ ಕೈಗೊಳ್ಳಲು ಜಿಲ್ಲಾಧಿ ಕಾರಿಗಳ ಅನುಮತಿ ಪಡೆಯಲಾಗಿತ್ತು.ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೇ ಪ್ರವಾಸಕ್ಕೆ ಬೇಕಾಗಿರುವ ವಾಹನದ ವ್ಯವಸ್ಥೆ,ಬೆಳಗಿನ ತಿಂಡಿ,ಮಧ್ಯಾಹ್ನದ ಊಟ ಹಾಗೂ ಸಂಜೆ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಪ್ರವಾಸದ ವ್ಯವಸ್ಥೆ ಮಾಡಿದ್ದಾರೆ.ಅಲ್ಲದೇ ಇಡೀ ದಿನ ಮಕ್ಕಳೊಂದಿಗೆ ಬೆರೆತ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಕ್ಕಳೊಂದಿಗೆ ಮಾತನಾಡಿ ಅವರ ಪ್ರವಾಸದ ಅನುಭವ ಗಳನ್ನು ಆಲಿಸಿದ್ದಾರೆ.

ಮಕ್ಕಳೂ ಜಿಲ್ಲಾಧಿಕಾರಿಯವರೊಂದಿಗೆ ಸ್ನೇಹಿತರ ರೀತಿ ಬೆರೆತಿದ್ದಾರೆ.ತಮ್ಮ ಬಳಿ ಇರೋದು ಜಿಲ್ಲಾಧಿಕಾರಿ ಎಂಬ ಅರಿವಿಲ್ಲದ ಮಕ್ಕಳು ಜಿಲ್ಲಾಧಿಕಾರಿಯೊಂದಿಗೆ ಹರಟೆ, ಕಾಮಿಡಿ,ಆಟ,ಊಟವನ್ನು ಮಾಡಿ ಸಂಭ್ರಮಿಸಿದ್ದಾರೆ. ಪಿಲಿಕುಳದ ಜೈವಿಕ ಉದ್ಯಾನವನ ಸುತ್ತಾಡಿದ್ದು ಮಾತ್ರವ ಲ್ಲದೇ ಅಲ್ಲಿಯದ್ದೇ ಮಾನಸ ವಾಟರ್ ಪಾರ್ಕ್ ನಲ್ಲಿ ಮನಸೋ ಇಚ್ಛೆ ನೀರಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.ಆಟ ಆಡಿ ನೋವನ್ನು ಮರೆತಿದ್ದಾರೆ.

ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಜಿಲ್ಲೆಯ ಜನಮಾನಸದಲ್ಲಿ ನೆಲೆವೂರಿದ್ದರು.ಪುತ್ತೂರು ಉಪವಿಭಾಗದ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ರಾಜೇಂದ್ರ ಕೆವಿ ದಕ್ಷತೆ ಮತ್ತು ದಿಟ್ಟ ನಿರ್ಧಾರಗಳಿಂದ ಜನರ ಮೆಚ್ಚುಗೆ ಗಳಿಸಿದ್ದರು.ಜನಸಾಮಾನ್ಯನ ಸಮಸ್ಯೆಗಳಿಗೂ ಕಿವಿಯಾಗುವ ಜಿಲ್ಲಾಧಿಕಾರಿ ಸಮಸ್ಯೆಗೆ ಅಲ್ಲೇ ಪರಿಹಾರವ ನ್ನು ನೀಡುವ ಮೂಲಕ ಜನರ ಗಮನ ಸೆಳೆದಿದ್ದರು. ಅಧಿ ಕಾರಿಗಳ ವಲಯದಲ್ಲಿ ಶುದ್ಧಹಸ್ತರೆಂದೇಹೆಸರುಗಳಿಸಿರುವ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿಯವ ಮಾನವೀಯ ಗುಣಕ್ಕೆ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಜನ ಕೊಂಡಾಡಿದ್ದಾರೆ.