ಜೀವಂತ ವ್ಯಕ್ತಿಯನ್ನು ಪೊಸ್ಟ್ ಮಾರ್ಟಮ್ ಗೆ ಕಳಿಸಿದರು – ಶವಾಗಾರಕ್ಕೆ ಬಂದ ವೈದ್ಯರು ನೋಡಿ ಶಾಕ್ ಆದರೂ…..

Suddi Sante Desk

ಬಾಗಲಕೋಟೆ –

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯ ಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಮರಣೋತ್ತರ ಪರೀಕ್ಷೆಗಾಗಿ ಜೀವಂತ ವ್ಯಕ್ತಿಯನ್ನೇ ಕಳುಹಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.

ಶಂಕರ್ ಗೊಂಬಿ ಎಂಬ 27 ವರ್ಷದ ವ್ಯಕ್ತಿಗೆ ಕಾರು ಅಪಘಾತದಲ್ಲಿ ತಲೆಗೆ ಗಂಭೀರವಾದ ಗಾಯವಾಗಿತ್ತು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ವೆಂಟಿಲೇಟರ್ ಅಳವಡಿಸಿ ಶಂಕರ್ ಅವರನ್ನು ಮಹಾಲಿಂಗಪುರ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದ್ದರು. ಮಾರ್ಗ ಮಧ್ಯೆಯೇ ಶಂಕರ್ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಹೀಗಾಗಿ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಿದ್ದರು.

ಇನ್ನೇನು ಪೋಸ್ಟ್ ಮಾರ್ಟಮ್ ಮಾಡಬೇಕೆಂದು ಮುಂದಾದಾಗ ಶವಾಗಾರಕ್ಕೆ ಬಂದ ವೈದ್ಯರಿಗೆ ಶವದ ಕೈಕಾಲು ಅಲುಗಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಇದನ್ನು ನೋಡಿ ಶಾಕ್ ಆದ ವೈದ್ಯರು ಪರೀಕ್ಷಿಸಿದಾಗ ವ್ಯಕ್ತಿ ಬದುಕಿದ್ದಾರೆ.

ತಕ್ಷಣ ಅವರನ್ನು ಮಹಾಲಿಂಗಪುರ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಶಂಕರ್ ಗೊಂಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.