ಬಾಗಲಕೋಟೆ –
ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬಸ್ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಕಿಡಿಗೇಡಿಗಳು ಮನಸೋ ಇಚ್ಛೆ ಕಲ್ಲು ಎಸೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಚಾಲಕ ಮೃತಪಟ್ಟ ಘಟನೆ ಜಮಖಂಡಿಯಲ್ಲಿ ಸಂಭವಿಸಿದೆ.ಜಮಖಂಡಿ ಸಾರಿಗೆ ಘಟಕದ ಬಸ್ ಚಾಲಕ ಎನ್.ಕೆ. ಅವಟಿ (55) ಮೃತ ದುರ್ದೈವಿಗಳಾಗಿದ್ದಾರೆ. ಪ್ರತಿಭಟನೆ ಮಾಡುತ್ತಿದ್ದ ಇವರು ಮೇಲಾಧಿಕಾರಿಗಳ ಸೂಚನೆ ಯಂತೆ ಎನ್.ಕೆ. ಅವಟಿ ಕೆಲಸಕ್ಕೆ ಹಾಜರಾಗಿದ್ದರು.
ಶುಕ್ರವಾರ ವಿಜಯಪುರದಿಂದ ಜಮಖಂಡಿ ನಗರಕ್ಕೆ ಬಸ್ ಚಲಾಯಿಸಿಕೊಂಡು ಎನ್.ಕೆ. ಅವಟಿ ಬರುತ್ತಿ ದ್ದರು. ಜಮಖಂಡಿಯ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬಸ್ ಅನ್ನು ಅಡ್ಡಗಟ್ಟಿದ ಕಿಡಿಗೇಡಿ ಗಳು ಬಸ್ ನತ್ತ ಕಲ್ಲು ತೂರಿದ್ದಾರೆ.ಬಸ್ ಮುಂಭಾಗ ದ ಕಲ್ಲುಗಳು ಗಾಜನ್ನು ಒಡೆದುಕೊಂಡು ಒಳ ತೂರಿ ಚಾಲಕನ ಮೇಲೆ ಬಿದ್ದಿದೆ. ಕಲ್ಲಿನೇಟಿಗೆ ಚಾಲಕ ಸ್ಥಿತಿ ಗಂಭೀರವಾಗಿತ್ತು. ಕುತ್ತಿಗೆಗೆ ಕಲ್ಲು ಬೀಳುತ್ತಿದ್ದಂತೆ ತಕ್ಷಣವೇ ವಾಹನ ನಿಲ್ಲಿಸಿದ ಚಾಲಕ ಅರೆ ಪ್ರಜ್ಞಾವ ಸ್ಥೆಗೆ ತಲುಪಿದ್ದರು. ದಿಢೀರ್ ಘಟನೆಯಿಂದ ಪ್ರಯಾ ಣಿಕರು ಗಾಬರಿಗೊಂಡಿದ್ದರು
ಕೂಡಲೇ ಚಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿ ಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಕರ್ತವ್ಯಕ್ಕೆ ಹಾಜರಾಗಿ ಸಾವಿಗೀಡಾದ ಚಾಲಕನ ಬಗ್ಗೆ ಪ್ರಯಾಣಿಕರು ಮರುಕ ವ್ಯಕ್ತಪಡಿಸಿದರು.ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ