ಧಾರವಾಡ –
ಧಾರವಾಡದ ಕೆಎಮ್ಎಫ್ ಎದುರಿಗೆ ಕಾರು ಮತ್ತು ಲಾರಿ ನಡುವೆ ಅಪಘಾತವಾಗಿದೆ. ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಕಾರೊಂದು ಹೊರಟಿತ್ತು. ಇನ್ನೂ ರಸ್ತೆಯಲ್ಲಿ ಮುಂದೆ ನಿಂತುಕೊಂಡಿದ್ದ ಆಟೋ ವನ್ನು ತಪ್ಪಿಸಲು ಹೋಗಿ ಕಾರು ಚಾಲಕ ಸ್ವಲ್ಪು ಪಕ್ಕಕ್ಕೆ ತಗೆದುಕೊಂಡಿದ್ದಾರೆ.
ಪಕ್ಕಕ್ಕೆ ತಗೆದುಕೊಳ್ಳುತ್ತಿದ್ದಂತೆ ಹಿಂದೆ ಎಮ್ ಸ್ಯಾಂಡ್ ತುಂಬಿಕೊಂಡು ಬರುತ್ದಿದ್ದ ಲಾರಿ ಡಿಕ್ಕಿಯಾಗಿದೆ. ಕಾರಿಗೆ ಲಾರಿ ಡಿಕ್ಕಿಯಾಗುತ್ತಿದ್ದಂತೆ ಕಾರು ಮರಳಿ ನಿಂತಿದೆ ಇನ್ನೂ ಪೊಲೀಸ್ ಆಯುಕ್ತರ ಕಚೇರಿಗೆ ಸಭೆಗೆ ಹೊರಟಿದ್ದ ಧಾರವಾಡ ಉಪವಿಭಾಗದ ಎಸಿಪಿ ಅನುಷಾ ಮತ್ತು ಉಪನಗರ ಪೊಲೀಸ್ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ಅವರ ಚಾಲಕರೊಂದಿಗೆ ಅಪಘಾತವನ್ನು ನೋಡಿ ಕೂಡಲೇ ಕಾರ್ಯಪ್ರವೃತ್ತರಾಗಿ ಕಾರಿನಲ್ಲಿ ಸಿಲುಕಿಕೆಂಡಿದ್ದ ಕಾರು ಚಾಲಕನನ್ನು ಕೂಡಲೇ ಹೊರ ತಗೆದು ಆಸ್ಪತ್ರೆಗೆ ಶಿಪ್ಟ್ ಮಾಡಿದರು.
ನಂತರ ಕಾರನ್ನು ಬೇರೆ ಕಡೆಗೆ ಹಾಗೇ ಸಂಚಾರ ಅಸ್ಥವ್ಯಸ್ಥಗೊಂಡಿದ್ದನ್ನು ಸ್ಥಳದಲ್ಲಿಯೇ ನಿಂತುಕೊಂಡ ಇಬ್ಬರು ಪೊಲೀಸ್ ಅಧಿಕಾರಿಗಳು ಎಲ್ಲವನ್ನು ಸರಿ ಮಾಡಿದರು.
ಎಸಿಪಿ ಮತ್ತು ಪೊಲೀಸ್ ಇನಸ್ಪೇಕ್ಟರ್ ಅವರೊಂದಿಗೆ ಅವರ ಸಿಬ್ಬಂದಿಗಳಾದ ಬಸವರಾಜ ಮಾಗುಂಡನ್ನವರ ಮತ್ತು ವಸಂತ ಮಾಳಗಿ ಸಾಥ್ ನೀಡಿದರು. ಇನ್ನೂ ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು.
ಅಪಘಾತದ ಕುರಿತಂತೆ ಮಾಹಿತಿಯನ್ನು ಪಡೆದುಕೊಂಡಿದ್ದು ಇನ್ನೂ ಇತ್ತ ಕಾಲಿಗೆ ಪೆಟ್ಟಾಗಿರುವ ಕಾರಿನ ಚಾಲಕ ಆಸ್ಪತ್ರೆಗೆ ದಾಖಲಾಗಿದ್ದು ಪ್ರಕರಣ ದಾಖಲು ಮಾಡಿಕೊಂಡಿರುವ ಧಾರವಾಡ ಸಂಚಾರಿ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.