ಹುಬ್ಬಳ್ಳಿ –
ಕರ್ತವ್ಯದ ಜೊತೆ ಪೊಲೀಸರ ಜವಾಬ್ದಾರಿ ತೋರಿಸಿಕೊಟ್ಟ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸರು – ಕರ್ತವ್ಯದ ಜೊತೆ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿಕೊಟ್ಟ PSI ಪುನಿತ್ ಕುಮಾರ ನೇತ್ರತ್ವದಲ್ಲಿ ಟೀಮ್ ಹೌದು
ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಅದರಲ್ಲೂ ಸಿಕ್ಕಾಪಟ್ಟಿ ಟ್ರಾಫಿಕ್ ನಡುವೆಯೂ ಕೂಡಾ ಹುಬ್ಭಳ್ಳಿಯ ಪೂರ್ವ ಸಂಚಾರಿ ಪೊಲೀಸರು ಮಾದರಿ ಕೆಲಸವನ್ನು ಮಾಡಿದ್ದಾರೆ ಹೌದು ಅದು ಹಲವು ಬೈಕ್ ಸವಾರರ ಪ್ರಾಣ ವನ್ನು ಉಳಿಸಿ ಮಾದರಿಯಾಗಿದ್ದಾರೆ.
ಹೌದು ಇಂತಹದೊಂದು ಘಟನೆಗೆ ಸಾಕ್ಷಿಯಾಗಿದೆ ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್.ಈ ಒಂದು ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ವಾಹನವೊಂದರಿಂದ ಇಂಜಿನ್ ಆಯಿಲ್ ಸೋರಿಕೆಯಾಗಿ ರಸ್ತೆಯ ತುಂಬೆಲ್ಲಾ ಸೋರಿತ್ತು.ಇನ್ನೇನು ಈ ಒಂದು ಆಯಿಲ್ ಮೇಲೆ ಬೈಕ್ ಗಳು ಏನಾದರೂ ಸಂಚಾರವನ್ನು ಮಾಡಿ ದ್ದರೆ ಸ್ಕೀಡ್ ಆಗಿ ಬೈಕ್ ಸವಾರರು ಬೀಳುತ್ತಿದ್ದರು.
ಹೀಗಿರುವಾಗ ಪರಿಣಾಮ ಅದೇ ರಸ್ತೆಯಲ್ಲಿ ಓಡಾಟ ನಡೆಸುವ ವಾಹನ ಸವಾರರ ಆತಂಕಕ್ಕೆ ಕಾರಣವಾಗಿತ್ತು.ಅಷ್ಟೇ ಅಲ್ಲದೇ ಬೈಕ್’ಗಳು ಸ್ಕಿಡ್ ಆಗುವ ಸಂಭವ ಹೆಚ್ಚಾಗಿತ್ತು.ಇದನ್ನು ಗಮನಿಸಿದ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ತಕ್ಷಣವೇ ಎಚ್ಚತ್ತು ಕೊಂಡು ಪಿಎಸ್ ಐ ಪುನಿತ್ ಕುಮಾರ್, ಎಎಸ್‌ಐ ಎಸ್.ಎನ್ ಭಜಂತ್ರಿ ನೇತೃತ್ವದಲ್ಲಿ ಕೂಡಲೇ ಸ್ಥಳಕ್ಕೇ ಆಗಮಿಸಿ ಸ್ವತಃ ಅವರೇ ರಸ್ತೆ ಮೇಲೆ ಮಣ್ಣು ತಂದು ಹಾಕುವ ಮೂಲಕ ಅದೆಷ್ಟೋ ಬೈಕ್ ಸವಾರರ ಪ್ರಾಣ ಉಳಿಸಿದ್ದಾರೆ.
ಇನ್ನೂ ತಮ್ಮ ಕೆಲಸ ಒತ್ತಡದ ನಡುವೆಯೂ ಸಾರ್ವಜನಿಕರ ಪ್ರಾಣ ಹಾಗೂ ಇತರ ಘಟನೆ ಆಗದಂತೆ ನೋಡಿಕೊಂಡಿರುವ ಸಂಚಾರಿ ಪೊಲೀಸರ ಕಾರ್ಯಕ್ಕೆ ಹುಬ್ಬಳ್ಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಈ ಮಹತ್ತರ ಕಾರ್ಯದಲ್ಲಿ ಎಎಸ್.ಐ ಎಂ.ಜಿ.ವೊಟೆಗಳ್ಳಿ, ಬಿ.ಬಿ.ಮಾಯ ಣ್ಣವರ, ಸಿಬ್ಬಂದಿಗಳಾದ ನವೀನ ಸೇರಿದಂತೆ ಇತರರು ಪಾಲ್ಗೊಂಡಿದ್ದು
ಠಾಣೆಯ ಈ ಒಂದು ಟೀಮ್ ನ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚಿಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ …..