ಬೆಂಗಳೂರು –

ನಾಡಿನ ಶಿಕ್ಷಕರಿಗೆ ನೆಮ್ಮದಿಯ ಸುದ್ದಿ ನೀಡಿದ ಶಿಕ್ಷಣ ಇಲಾಖೆ,ಒಮ್ಮೆಯಾದರೂ ಶಿಕ್ಷಕರ ಪರವಾಗಿ ಆದೇಶ ಮಾಡಿದ ಇಲಾಖೆ – ಸುದ್ದಿ ಸಂತೆಯ ನಿರಂತರ ಸರಣಿ ವರದಿಯಿಂದ ಎಚ್ಚೆತ್ತುಕೊಂಡ ಇಲಾಖೆಗೆ ಶಿಕ್ಷಕರ ಪರವಾಗಿ ಧನ್ಯವಾದಗಳು
ಸಧ್ಯದ ಸಂಕಷ್ಟದ ಪರಸ್ಥಿತಿಯಲ್ಲಿ ಕೋವಿಡ್ ಕರೋನಾ ಎಂದರೆ ಆತಂಕದಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಶಿಕ್ಷಣ ಇಲಾಖೆ ನೆರವಾಗಿದೆ.ಕಳೆದ ಎರಡು ಮೂರು ತಿಂಗಳಿನಿಂದ ಈ ಒಂದು ಮಹಾಮಾರಿಯಿಂದಾಗಿ ಆತಂಕಗೊಂಡಿದ್ದ ನಾಡಿನ ಶಿಕ್ಷಕರಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಹೌದು ರಾಜ್ಯಾಧ್ಯಂತ ಕೋವಿಡ್ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದ ಶಿಕ್ಷಕರಿಗೆ ಕೊನೆಗೂ ಮುಕ್ತಿಯನ್ನು ನೀಡಿದೆ.ಶೈಕ್ಷಣಿಕ ವರ್ಷ ಆರಂಭಗೊಂಡಿದ್ದರು ಶಾಲೆಗಳು ಬಾಗಿಲು ತೆರೆದಿದ್ದರೂ ಲಾಕ್ ಡೌನ್ ಇದ್ದರು ಇನ್ನೂ ಕೋವಿಡ್ ಕರ್ತವ್ಯಕ್ಕೆ ಶಿಕ್ಷಕರನ್ನು ರಾಜ್ಯಾಧ್ಯಂತ ನಿಯೋಜನೆ ಮಾಡಲಾಗಿತ್ತು ಈ ಕುರಿತಂತೆ ಶಿಕ್ಷಕರ ಧ್ವನಿಯಾಗಿ ಸುದ್ದಿ ಸಂತೆ ನಿರಂತರವಾಗಿ ಬಿಡುವಿಲ್ಲ ದೇ ಸರಣಿ ರೂಪದಲ್ಲಿ ವರದಿಯೊಂದನ್ನು ಪ್ರಸಾರ ಮಾಡಿತ್ತು.

ನಿರಂತರ ವರದಿ ಯ ಫಲವಾಗಿ ಕೊನೆಗೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಭಯದಿಂದ ಆತಂಕದಲ್ಲಿ ಕೋವಿಡ್ ಕೆಲಸ ಮಾಡುತ್ತಿದ್ದ ಶಿಕ್ಷಕರಿಗೆ ಮುಕ್ತಿ ಯನ್ನು ನೀಡಿದೆ.ಕೂಡಲೇ ರಾಜ್ಯಾಧ್ಯಂತ ಅವರನ್ನು ಬಿಡುಗಡೆಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ವಕುಮಾರ ಆದೇಶವನ್ನು ಮಾಡಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ಯನ್ನು ನೀಡಿದ್ದಾರೆ.

ಇದರೊಂದಿಗೆ ಬೆಳ್ಳಂ ಬೆಳಿಗ್ಗೆ ರಾಜ್ಯದ ಎಲ್ಲಾ ಶಿಕ್ಷಕರಿಗೆ ಒಮ್ಮೆಯಾದರೂ ಅವರ ಪರವಾಗಿ ಆದೇಶವನ್ನು ಮಾಡಿದ್ದಾರೆ. ಇನ್ನೂ ಶಿಕ್ಷಕರ ಧ್ವನಿ ಯಾಗಿ ನಿರಂತವಾಗಿ ವರದಿ ಗಳನ್ನು ಪ್ರಸಾರ ಮಾಡಿದ್ದ ಸುದ್ದಿ ಸಂತೆಯ ಕಾರ್ಯವನ್ನು ನಾಡಿನ ಶಿಕ್ಷಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.ಏನೇ ಆಗಲಿ ಸಧ್ಯ ಕೋವಿಡ್ ನಿಂದಾಗಿ ಶಿಕ್ಷಕರಿಗೆ ಮುಕ್ತಿ ಸಿಕ್ಕಿದ್ದು ದೊಡ್ಡ ಸಂತೋಷದ ವಿಚಾರ