ಬೆಂಗಳೂರು –
ಶಿಕ್ಷಣ ಇಲಾಖೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಧ್ಯ ಇರುವ ಬಿಸಿಯೂಟದ ಸಮಯವನ್ನು ಬದಲಾವಣೆ ಮಾಡಿದೆ.ಹೌದು ಶಿಕ್ಷಣ ಇಲಾಖೆ ಯು ರಾಜ್ಯದ ಶಾಲಾ ಮಕ್ಕಳ ಬಿಸಿಯೂಟ ಸಮಯದ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಿ ಸೂಚನೆ ಯನ್ನು ಮಾಡಿದೆ.
1 ರಿಂದ 5 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 1 ಗಂಟೆಯಿಂದ 1.45 ರವರೆಗೆ ಬಿಸಿಯೂಟ ವಿತರಿಸಲು ಹೊಸದಾದ ಸೂಚನೆಯನ್ನು ನೀಡಿದೆ ಶಾಲೆಗಳಲ್ಲಿ ಎಲ್ಲಾ ಮಕ್ಕಳನ್ನು ಒಟ್ಟಿಗೆ ಸಾಲಾಗಿ ನಿಲ್ಲಿಸಿ ಆಹಾರ ವಿತರಿಸುವುದು ಹಾಗೂ ಕಡಿಮೆ ಸಮಯದಲ್ಲಿ ಊಟ ಸ್ವೀಕರಿಸುವುದು ತಟ್ಟೆ-ಲೋಟ ತೊಳೆಯುವಾಗ ನೂಕನುಗ್ಗಲು ತಡೆಗಟ್ಟ ಬೇಕಾಗಿದೆ.
ಈ ಹಿನ್ನೆಲೆಯಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ 1 ಗಂಟೆಯಿಂದ 1.45 ರವರೆಗೆ, 6 ರಿಂದ 10 ನೇ ತರಗತಿ ಮಕ್ಕಳಿಗೆ 2 ರಿಂದ 2.45 ರವರೆಗೆ ಬಿಸಿ ಯೂಟ ವಿತರಿಸಲು ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.ಇನ್ನು ರಾಜ್ಯ ಸರ್ಕಾರದ ಮೌಲ್ಯಮಾಪನ ಪ್ರಾಧಿಕಾರ ಮತ್ತು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯವು ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರ ಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾ ನಕ್ಕಾಗಿ ಮಾಡಿರುವ ವಿವಿಧ 20 ಶಿಫಾರಸುಗ ಳನ್ನು ಮಾಡಿದೆ.ಒಟ್ಟಾರೆ ಬಿಸಿಯೂಟಕ್ಕಾಗಿ ಈ ಹಿಂದೆ ಸಮಯ ಈಗ ಬದಲಾವಣೆಯಾಗಿದ್ದು ಇದಕ್ಕೆ ರಾಜ್ಯದ ಶಾಲೆಗಳಲ್ಲಿ ಯಾವ ರೀತಿ ಸ್ಪಂದನೆ ಸಿಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..