ಪರೀಕ್ಷಾ ವಿಚಾರದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಇಲಾಖೆ – ಕಡ್ಡಾಯ ಹಾಜರಾತಿ‌ ನಿಯಮ ಸಡಿಲಿಸಲು ಸೂಚನೆ…..

Suddi Sante Desk

ಬೆಂಗಳೂರು –

ಕೊರೋನಾ ಕಾರಣದಿಂದ ಕಳೆದೆರಡು ವರ್ಷ ಸರಿಯಾಗಿ ಶಾಲಾ ಕಾಲೇಜುಗಳು ಸರಿಯಾಗಿ ನಡೆದೇ ಇಲ್ಲ. ಹೀಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಮಾರ್ಚ್ ಮತ್ತಪ ಏಪ್ರಿಲ್ ತಿಂಗಳಿಂದ ಶುರುವಾಗಲಿರುವ ಎಸ್‌ಎಸ್‌ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.ಹೌದು ಅಂತಿಮ‌ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿ‌ ನಿಯಮವನ್ನು ಸಡಿಲಿಸಲು ನಿರ್ಧರಿ ಸಿದೆ.ಭೌತಿಕ ತರಗತಿಗಳ ಆರಂಭದ ವಿಳಂಬ ಆನ್‌ಲೈನ್ ತರಗತಿಗಳ ಸಮಯದಲ್ಲಿ ನೆಟ್‌ವರ್ಕ್ ಸಮಸ್ಯೆಗಳನ್ನು ಪರಿಗಣಿಸಿ ಈ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆಗ ಳಿಗೆ ಹಾಜರಾಗಲು 75% ಹಾಜರಾತಿಯನ್ನು ಕಡ್ಡಾಯಗೊ ಳಿಸದಿರಲು ಇಲಾಖೆ ನಿರ್ಧರಿಸಿದೆ.

ಈ ಬಗ್ಗೆ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಈ ವರ್ಷದಲ್ಲಿ 75% ಹಾಜರಾತಿ ಯನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಲ್ಲ ಈ ವಿಚಾರವಾಗಿ ಕಾಲೇಜು ಮಟ್ಟದಲ್ಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಹಾಜರಾತಿ ಕೊರತೆಯಿಂದ ಪ್ರತಿ ವರ್ಷ ಕನಿಷ್ಠ 2,000 ರಿಂದ 4,000 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದಿಲ್ಲ ಕರ್ನಾಟಕ ಶಿಕ್ಷಣ ಕಾಯಿದೆ, 2006 ರ ನಿಯಮ 21 ವಿದ್ಯಾರ್ಥಿಗಳು 10 ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು 75% ಹಾಜರಾತಿಯನ್ನು ಕಡ್ಡಾಯಗೊಳಿಸುತ್ತದೆ ಸುಪ್ರೀಂ ಕೋರ್ಟ್ ನಿರ್ದೇಶನಗಳ ನ್ನು ಅನುಸರಿಸಿ ಕಾಯಿದೆಗೆ ತರಲಾದ ತಿದ್ದುಪಡಿಗಳ ಪ್ರಕಾರ, ಯಾವುದೇ ವಿದ್ಯಾರ್ಥಿಗಳು ಹಾಜರಾತಿಯಲ್ಲಿ (ಶೇ. 75 ಕ್ಕಿಂತ ಕಡಿಮೆ) ಕೊರತೆಯಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ಸಲಾಗುವುದಿಲ್ಲ ಮತ್ತು ಪ್ರವೇಶ ಪತ್ರಗಳನ್ನು ನೀಡಲಾಗು ವುದಿಲ್ಲ ಎಂಬ ಉಲ್ಲೇಖವಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.