ಬೆಳಗಾವಿ –
SSLC ಪರೀಕ್ಷೆ ಯಲ್ಲಿ 0% ಫಲಿತಾಂಶ ದಾಖಲಿಸಿರುವ ರಾಜ್ಯದ 78 ಶಾಲೆಗಳ ಪೈಕಿ, ಆರು ಬೆಳಗಾವಿ ಮತ್ತು ಐದು ಶಾಲೆಗಳು ಚಿಕ್ಕೋಡಿಯಲ್ಲಿದ್ದು ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 11 ಶಾಲೆ ಗಳು ಫಲಿತಾಂಶದಲ್ಲಿ ತೀವ್ರ ಕುಸಿತ ಕಂಡಿವೆ. ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸ್ಪಷ್ಟನೆ ಕೋರಿ 11 ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಎಲ್ಲಾ 11 ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಿದ್ದೇವೆ ಎಂದು ಎರಡೂ ಶೈಕ್ಷಣಿಕ ಜಿಲ್ಲೆಗಳ ಉಸ್ತುವಾರಿ ಡಿಡಿಪಿಐ ಮೋಹನ್ ಕುಮಾರ್ ಹಂಚಾಟೆ ತಿಳಿಸಿದ್ದಾರೆ. “0% ಫಲಿತಾಂಶ ದಾಖಲಿ ಸಿದ ಹೆಚ್ಚಿನ ಶಾಲೆಗಳು ಶಿಕ್ಷಕರ ಕೊರತೆ ಯನ್ನು ಹೊಂದಿವೆ ಎನ್ನಲಾಗುತ್ತಿದೆ. ಹಲವು ಶಾಲೆಗಳಲ್ಲಿ ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದು, ಒಬ್ಬರೇ ಶಿಕ್ಷಕರಿದ್ದಾರೆ
ಇನ್ನು ನಿರ್ಲಕ್ಷ್ಯ ತೋರುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದೇವೆ ಎಂದರು.ಇನ್ನು ಕೆಲವು ಶಾಲೆಗಳ ಫಲಿತಾಂಶವನ್ನು ಸುಧಾರಿಸಲು ಮತ್ತು 0% ಫಲಿತಾಂಶಗ ಳನ್ನು ದಾಖಲಿಸಿರುವ ಶಾಲೆಗಳನ್ನು ತೆಗೆದುಹಾಕಲು, ಡಿಡಿಪಿಐ ಮತ್ತು ಅವರ ತಂಡವು ಈ ವರ್ಷ ವಿಭಿನ್ನ ಯೋಜನೆ ಯಗಳನ್ನು ಹಾಕಿಕೊಂಡಿದೆ.
ಕೆಲವು ವಿಷಯಗಳಲ್ಲಿ ಅನುತ್ತೀರ್ಣ. ರಾದ ವಿದ್ಯಾರ್ಥಿಗಳಿಗೆ ವಿಷಯ ತಜ್ಞರ ಮೂಲಕ ನೆರವು ನೀಡಲು ನಿರ್ಧರಿಸಿ ದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಫೇಲ್ ಆಗಿರುವ ವಿಷಯಗಳಲ್ಲಿ ತೇರ್ಗಡೆಯಾ ಗಲು ಮೂರು ಅವಕಾಶಗಳನ್ನು ಹೊಂದಿ ರುತ್ತಾರೆ. ಮತ್ತು ಒಂದೇ ಪ್ರಯತ್ನದಲ್ಲಿ ಎಲ್ಲಾ ವಿಷಯಗಳನ್ನು ಪಾಸ್ ಮಾಡಿ ಕೊಂಡ ವಿದ್ಯಾರ್ಥಿಗಳು ಮಾರ್ಕ್ಸ್ ಕಾರ್ಡ್ ಗಳನ್ನು ಸ್ವೀಕರಿಸಲಿದ್ದಾರೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..























