ಚಿತ್ರದುರ್ಗ –
ಜಾತಿ ನಿಂದನೆ ಪ್ರಕರಣ ಕುರಿತಂತೆ ಶಿಕ್ಷಣ ಸಂಯೋಜಕ ಸಿ.ಶಿವಾನಂದ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಹೌದು ಹಿರಿಯೂರು ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಸಿ.ಶಿವಾನಂದ ಅವರನ್ನು ಜಾತಿ ನಿಂದನೆ ಸಂಬಂಧ ಸೇವೆಯಿಂದ ಅಮಾನತ್ತು ಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇ ಶಕರು ಆದೇಶಿಸಿದ್ದಾರೆ.
ಶಿಕ್ಷಣ ಸಂಯೋಜಕ ಸಿ.ಶಿವಾನಂದ ಅವರ ವಿರುದ್ಧ ಜಾತಿ ನಿಂದನೆ ಸಂಬಂಧ 2023ರ ಫೆಬ್ರವರಿ 15ರಂದು ಹಿರಿಯೂರು ನಗರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರ ಕಚೇರಿಯಲ್ಲಿ ಕ್ರಿಮಿನಲ್ ಪ್ರಕರಣ ಸಂಖ್ಯೆ 0026/2023 ರಲ್ಲಿ ಕೇಸು ದಾಖಲಾಗಿರುತ್ತದೆ.
ಇದರಂತೆ ಹಿರಿಯೂರು ಉಪವಿಭಾಗ ಪೊಲೀಸ್ ಉಪಾಧೀಕ್ಷಕರು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋ ಪಣಾ ಪಟ್ಟಿ ಸಲ್ಲಿಸಿರುವಂತೆ ಇಲಾಖಾ ನಿಯ ಮಾನುಸಾರ ಶಿಕ್ಷಣ ಸಂಯೋಜಕ ಸಿ.ಶಿವಾನಂದ ಅವರನ್ನು 2023ರ ಮೇ 18ರಂದು ಪ್ರಕರಣ ದಾಖಲಾದ ದಿನಾಂಕದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಚಿತ್ರದುರ್ಗ…..