ಬಸ್ರೂರು –
ಸಾಮಾನ್ಯವಾಗಿ ಯಾರಿಗಾದರೂ ಹಣ ಸಿಕ್ಕರೆ ಸಿಕ್ಕ ಹಣವನ್ನು ಯಾಕೆ ಇನ್ನೊಬ್ಬರಿಗೆ ಕೊಡಬೇಕು ಎನ್ನದೇ ತಾವೇ ಇಟ್ಟುಕೊಳ್ಳುತ್ತಾರೆ ಆದರೆ ಮೂವರು ವಿದ್ಯಾರ್ಥಿ ನಿಯರಿಗೆ ಹತ್ತು ಸಾವಿರ ರೂಪಾಯಿ ಸಿಕ್ಕರು ತಾವೇ ಇಟ್ಟುಕೊಳ್ಳದೇ ಕಳೆದಕೊಂಡವರಿಗೆ ಮರಳಿಸಿದ್ದಾರೆ
ಹೌದು ಕುಂದಾಪೂರ ತಾಲ್ಲೂಕಿನ ಬಸ್ರೂರಿನ ಕೋಣಿ ಸರ್ಕಾರಿ ಪ್ರೌಢಶಾಲೆಯ ಸಮೀಪ ರಸ್ತೆಯಲ್ಲಿ ವಿದ್ಯಾರ್ಥಿ ನಿಯರಿಗೆ ಹತ್ತು ಸಾವಿರ ರೂಪಾಯಿ ಹಣ ಸಿಕ್ಕಿದೆ ಪ್ರೌಢ ಶಾಲಾ ವಿದ್ಯಾರ್ಥಿನಿಯರಾದ ಶ್ರಾವ್ಯಾ, ಐಶ್ವರ್ಯ ಜೆ., ಪ್ರಸ್ತುತಿ ಮತ್ತು ವೈಷ್ಣವಿ ಅವರಿಗೆ ಈ ಒಂದು ಹಣ ಸಿಕ್ಕಿದೆ ಕೂಡಲೇ ಅವರು ಹಣ ಕಳೆದುಕೊಂಡವರನ್ನು ಪತ್ತೆ ಮಾಡಿ ಸುಲೇಖಾ ಅವರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮುಖ್ಯೋಪಾಧ್ಯಾಯ ವಿದ್ವಾನ್ ಮಾಧವ ಅಡಿಗ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.ಹಣ ಕಳೆದುಕೊಂಡ ಸುಲೇಖಾ ಅವರು ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಸಿಹಿತಿಂಡಿ ಕೊಟ್ಟು ಕೃತಜ್ಞತೆ ಅರ್ಪಿಸಿದ್ದಾರೆ.ಶಿಕ್ಷಣ ಸಚಿವರ ಪ್ರಶಂಸೆ ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜತೆಗೆ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ಕೇಂದ್ರಗಳು ಆಗಬೇಕು. ತಮಗೆ ದಾರಿಯಲ್ಲಿ ದೊರೆತ ಹಣವನ್ನು ಮಾಲಕರಿಗೆ ಹಿಂದಿ ರುಗಿಸಿದ ಕುಂದಾಪುರ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿನಿಯರಾದ ಶ್ರಾವ್ಯಾ, ಐಶ್ವರ್ಯ ಜೆ., ಪ್ರಸ್ತುತಿ ಮತ್ತು ವೈಷ್ಣವಿ ಅವರ ಪ್ರಾಮಾಣಿಕತೆ ಪ್ರಶಂಸನೀಯ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಟ್ವೀಟರ್‌ನಲ್ಲಿ ಅಭಿನಂದಿಸಿದ್ದಾರೆ.