ಬೆಂಗಳೂರು –
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಯು ರಾಜ್ಯದ ಪದವೀಧರ ಶಿಕ್ಷಕರಿಗೆ ಭರ್ಜರಿ ಸಿಹಿಸುದ್ದಿ ಯನ್ನು ನೀಡಿದೆ.ಹೌದು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಪರೀಕ್ಷೆಯಿಲ್ಲದೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ಬಡ್ತಿ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.ಈ ಕುರಿತು ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಾಥಮಿಕ ಶಾಲಾ ಪದವೀ ಧರ ಶಿಕ್ಷಕರಿಗೆ ಪರೀಕ್ಷೆಯಿಲ್ಲದೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ (6ರಿಂದ 8 ನೇ ತರಗತಿ) ಬಡ್ತಿ ನೀಡಲು ಶಿಕ್ಷಣ ಇಲಾಖೆ ನಿರ್ಣಯ ಕೈಗೊಂಡಿದ್ದು ಎಷ್ಟು ಪ್ರಮಾಣ ದ ಹುದ್ದೆಗಳನ್ನು ಬಡ್ತಿಯಡಿ ಪರಿಗಣಿಸಬೇಕೆಂದು ಇನ್ನೊಂದು ವಾರದಲ್ಲಿ ಅಂತಿಮಗೊಳಿಸಲಾಗುವುದು ಎಂದರು.

ಇನ್ನು ಸರ್ಕಾರದ ಈ ನಿರ್ಧಾರದಿಂದ 52 ಸಾವಿರ ಪದವೀ ಧರ ಶಿಕ್ಷಕ ಹುದ್ದೆಗಳಲ್ಲಿ ಕನಿಷ್ಟ 17 ಸಾವಿರ ಶಿಕ್ಷಕರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.ಇದರ ನಡುವೆ ಒಂದು ವೇಳೆ ಶಿಕ್ಷಕರ ಬೇಡಿಕೆಯಂತೆ ಬಡ್ತಿ ಆಧಾರದಲ್ಲಿ ಭರ್ತಿ ಮಾಡುವ ಸ್ಥಾನಗಳನ್ನು ಶೇ 50 ಕ್ಕೆ ಹೆಚ್ಚಿಸಿದಲ್ಲಿ 26 ಸಾವಿರ ಪದವೀ ಧರ ಶಿಕ್ಷಕರಿಗೆ ಬಡ್ತಿ ದೊರೆಯಬಹುದು.