ಬೆಂಗಳೂರು –
ಈ ವರ್ಷ ಯಾವುದೇ ರೀತಿಯಲ್ಲೂ ಪಠ್ಯ ಕ್ರಮವನ್ನು ಕಡಿತಗೊಳಿಸುವ ಯಾವುದೇ ನಿರ್ಧಾರಗಳಿಲ್ಲ.ಒಂದು ವೇಳೆ ಪಠ್ಯಕ್ರಮ ಕಡಿತಗೊಳಿಸಿದರೆ ಮುಂದಿನ ವರ್ಷದ ಶಿಕ್ಷಣದ ಮೇಲೆ ತೀವ್ರವಾದ ಪರಿಣಾಮ ಬೀರುವ ಕಾರಣ ಈ ನಿರ್ಧಾರ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು ಉಪನ್ಯಾಸಕರು ಮತ್ತು ಶಿಕ್ಷಕರು ಈ ಬಾರಿ ವಿಶೇಷ ತರಗತಿಗಳನ್ನು ಮಾಡುವ ಮೂಲಕ ಪಠ್ಯವಸ್ತುಗಳನ್ನು ನಿಗದಿತ ಸಮಯದೊಳಗೆ ಮುಗಿಸುವಲ್ಲಿ ಶ್ರಮ ವಹಿಸಲಿ ದ್ದಾರೆ ಎಂದರು
ಇನ್ನೂ ಪ್ರಮುಖವಾಗಿ ಬಿಸಿಯೂಟ ಸೇರಿದಂತೆ ಮಕ್ಕಳಿಗೆ ದೊರಕಬೇಕಾದ ಸೌಲಭ್ಯಗಳನ್ನು ಆರಂಭಿಸಲಾಗಿದೆ. ಮುಂದೆ ಶಾಲೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸ ಲಾಗುವುದು. ಮಕ್ಕಳಿಗೆ ಕೋವಿಡ್-19 ವ್ಯಾಕ್ಸಿನ್ ನೀಡಲು ಪರೀಕ್ಷೆಗಳು ನಡೆಯುತ್ತಿವೆ.ವ್ಯವಸ್ಥಿತ ಪರೀಕ್ಷೆಗಳ ನಂತರ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಅನ್ನು ನೀಡಲಾಗುವುದು ಎಂದರು