ಬೆಂಗಳೂರು –
ಅಂತೂ ಇಂತೂ ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಗೆ ಬಹುತೇಕವಾಗಿ ಕೊಕ್ ಕೊಡುವ ಸೂಚನೆಗಳು ಕಾಣುತ್ತಿದ್ದು ಹೀಗಾಗಿ ನೂತನಾಗಿ ಸಚಿವರಾದ ಮೇಲೆ ಶಿಕ್ಷಣ ಸಚಿವರು ಯಾರು ಆಗಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.ಈ ಹಿಂದೆ ಸಚಿವರಾಗಿದ್ದ ಸುರೇಶ್ ಕುಮಾರ್ ಪುನಃ ಸಚಿವರಾಗೊದು ಅನುಮಾನ ಎನ್ನಲಾಗಿದ್ದು ಹೀಗಾಗಿ ಈ ಒಂದು ಖಾತೆಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಯಾರಾಗಲಿದ್ದಾರೆ ಎಂಬ ಮಾತುಗಳು ಶೈಕ್ಷಣಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಸಧ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಾಗುತ್ತಿದ್ದು ಇವರೊಂದಿಗೆ ಇನ್ನೂ ಹಲವರು ಸಚಿವರಾಗುತ್ತಿದ್ದಾರೆ ಈ ಹಿಂದೆ ಇವರು ಶಿಕ್ಷಣ ಸಚಿವರಾಗಿ ಅನುಭವ ಇದ್ದವರು.
ಇವರು ಆದರೆ ತುಂಬಾ ಸರಳವಾಗುತ್ತದೆ ಅನುಭವ ಇದೆ ಆದರೆ ಬೇರೆ ಯಾರಾದರೂ ಆದರೆ ಮತ್ತೆ ಏನಾದರೂ ಹೊಸ ಹೊಸ ನಿಯಮಗಳು ಬದಲಾ ವಣೆಗಳು ಆಗುತ್ತವೆನಾ ಇದರಿಂದಾಗಿ ವರ್ಗಾವಣೆ ವಿಳಂಬವಾಗುತ್ತದೆನಾ ಇಲ್ಲವೇ ಏನಾದರೂ ಹೊಸ ಬದಲಾವಣೆಗೆ ತಗೆದುಕೊಂಡು ಬಂದು ನಾಡಿನ ಶಿಕ್ಷಕರ ನೋವಿಗೆ ಸಮಸ್ಯೆಗೆ ಸ್ಪಂದಿಸುತ್ತಾರೆನಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಏನೇ ಆಗಲಿ ಯಾರೇ ಬರಲಿ ವರ್ಗಾವಣೆ ವೇಗ ಪಡೆದುಕೊಳ್ಳಲಿ ಏಕರೂಪದ ವರ್ಗಾವಣೆಯ ನೀತಿ ಜಾರಿಗೆ ಬರಲಿ ಶಿಕ್ಷಕರ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿ ಎಂಬುದೇ ನಮ್ಮ ಆಶಯವಾಗಿದ್ದು ಇದರ ನೀರಿಕ್ಷೆಯಲ್ಲಿ ನಾಡಿನ ಶಿಕ್ಷಕರಿದ್ದಾರೆ.