ಬೆಂಗಳೂರು –
SSLC ಉತ್ತರ ಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನ ಮಾಡಿದ ಶಿಕ್ಷಕರನ್ನು ಕಪ್ಪುಪಟ್ಟಿಗೆ ಸೇರಿಸಿ ಜೊತೆಗೆ ತಿಂಗಳ ವೇತನವನ್ನು ಕಡಿತಗೊಳಿಸಬೇಕು ಎಂದು ಬಿಜೆಪಿ ಸದಸ್ಯ ರವಿಕುಮಾರ್ ಒತ್ತಾಯಿಸಿದ್ದಾರೆ.ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಲಾಗಿದೆ.ಈ ಅಸಮ ರ್ಪಕ ಮೌಲ್ಯಮಾಪನ ಮಾಡಿದವರಿಗೆ ದಂಡ ವಿಧಿಸಲಾ ಗಿದೆ.ಇವರಿಂದ ವಸೂಲಾದ ದಂಡವೆಷ್ಟು ಎಂದು ರವಿಕು ಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಶ್ ಈ ಕುರಿತು ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ನಿರ್ಣಯ ಮಾಡುತ್ತೇವೆ ಎಂದರು.

ಉತ್ತರಕ್ಕೆ ತೃಪ್ತರಾಗದ ರವಿಕುಮಾರ್ ಅಸಡ್ಡೆಯಿಂದ ತಪ್ಪು ಆಗಿರೋದು ನಿಜ.ಕೂಡಲೇ ಅಂತಹ ಶಿಕ್ಷಕರನ್ನು ಬ್ಲಾಕ್ ಲಿಸ್ಟ್ ಮಾಡಿ ಮುಂದೆ ಮೌಲ್ಯ ಮಾಪನಕ್ಕೆ ಕರೆಯಬೇಡಿ. ಅಲ್ಲದೆ ಒಂದು ತಿಂಗಳ ಸಂಬಳ ಕಟ್ ಮಾಡಿ ಎಂದು ಮನವಿ ಮಾಡಿದರು.