ಮೈಸೂರು –
ಆಗಸ್ಟ್ 23 ರಿಂದ ರಾಜ್ಯದಲ್ಲಿ ಆರಂಭವಾಗಲಿರುವ ಶಾಲೆಯಲ್ಲಿ ಬಿಸಿ ಊಟಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಶಿಕ್ಷ ಸಚಿವ ಬಿ ಸಿ ನಾಗೇಶ್ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರುಸೋಮವಾರ ಪ್ರಾರಂಭವಾಗುವ 9 ಮತ್ತು 10ನೇ ತರಗತಿಯ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ನೀಡುವ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದೆ ಎಂದರು. ಕೋವಿಡ್ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತಿತ್ತು.ಸಧ್ಯ ಕೋವಿಡ್ ಹಿನ್ನೆಲೆ ಬಿಸಿಯೂಟದ ವ್ಯವಸ್ಥೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ಸಚಿವರು ಹೇಳಿದರು
ಇನ್ನೂ ಶೇ.2ಕ್ಕೂ ಹೆಚ್ಚು ಸೋಂಕು ಕಂಡು ಬಂದರೆ ಶಾಲೆಗಳಿಗೆ ರಜೆ ಘೋಷಿಸಿ ಶಾಲೆ ಆರಂಭವಾದ ಬಳಿಕ ಕೋವಿಡ್ ಮಹಾಮಾರಿ ಯಾವ ರೀತಿ ಸ್ವರೂಪ ಪಡೆಯಲಿದೆ ಎಂದು ಕಾದು ನೋಡಬೇ ಕಿದೆ ಎಂದರು.ಒಟ್ಟಿನಲ್ಲಿ ಮಕ್ಕಳು ಸುರಕ್ಷಿತವಾಗಿರಲಿ ಎಂಬುದೇ ನಮ್ಮ ಆಶಯ ಎಂದು ಶಿಕ್ಷಣ ಸಚಿವರು ಹೇಳಿದರು.ಒಂದು ಕಡೆ ಶಿಕ್ಷಕರ ಹಿತದೃಷ್ಟಿ ಮತ್ತೊಂದು ಕಡೆಗೆ ಮಕ್ಕಳ ಕಾಳಜಿಯಿಂದ ಈ ಒಂದು ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು