ಬೆಂಗಳೂರು –
ರಾಜ್ಯದ ಶಿಕ್ಷಕರಿಗೆ ಆತಂಕವನ್ನುಂಟು ಮಾಡಿದ ಶಿಕ್ಷಣ ಸಚಿವರ ಹೇಳಿಕೆ – ಹೊಸದೊಂದು ಯೋಜನೆ ಆರಂಭ ಮಾಡಿ ಆದರೆ ಶಿಕ್ಷಕರ ವೇತನ ಕಡಿತ ಮಾಡಿ ಯೋಜನೆ ಅಯ್ಯೋ…..
ಸಾಮಾನ್ಯವಾಗಿ ಯಾವುದಾದರೂ ಒಂದು ಹೊಸ ಯೋಜನೆಯನ್ನು ಜಾರಿ ಮಾಡುವ ಮುನ್ನ ಸಾಧಕ ಬಾಧಕಗಳನ್ನು ಒಮ್ಮೆ ವಿಚಾರ ಮಾಡ ಲಾಗುತ್ತದೆ.ಎಲ್ಲವನ್ನೂ ವಿಚಾರ ಮಾಡಿಯೋ ಹೊಸ ಯೋಜನೆಯನ್ನು ಜಾರಿಗೆ ಮಾಡಿ ಅನು ಷ್ಠಾನಕ್ಕೆ ತರಲಾಗುತ್ತದೆ.ಇನ್ನೂ ಯಾರಿಗಾದರೂ ಒಂದು ಹೊಸ ಯೋಜನೆಯನ್ನು ನೀಡುವಾಗ ಅವರಿಂದ ಹಣವನ್ನು ತಗೆದುಕೊಂಡು ಅವರಿಗೆ ಆ ಒಂದು ಯೋಜನೆಯನ್ನು ನೀಡಿದರೆ ಖಂಡಿತ ವಾಗಿಯೂ ಅದನ್ನು ಯಾರೂ ಕೂಡಾ ಒಪ್ಪಿಕೊ ಳ್ಳೊದಿಲ್ಲ
ಹೌದು ಹೀಗಿರುವಾಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.ಶಿಕ್ಷಕರಿಗಾಗಿ ವಿಮೆ ಯೋಜನೆ ಯನ್ನು ಜಾರಿಗೆ ತರಲು ಮುಂದಾಗಿದ್ದಾರೆ ಇದೇನು ಸರಿಯಾದ ವಿಚಾರ ಆದರೆ ಈ ಒಂದು ಯೋಜ ನೆಗಾಗಿ ಶಿಕ್ಷಕರ ವೇತನದಲ್ಲಿ ಹಣವನ್ನು ಕಡಿತ ವನ್ನು ಮಾಡಿ ವಿಮೆ ಯೋಜನೆಯನ್ನು ಜಾರಿಗೊ ಳಿಸುವಾಗಿ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಸದಸ್ಯರಾದ ಎಸ್ ವಿ ಸಂಕನೂರು ಅವರು ಶಿಕ್ಷಕರಿಗೆ ಏನೇಲ್ಲಾ ಸೌಲಭ್ಯ ಗಳನ್ನು ನೀಡಿದ್ದಿರಿ ಏನೇಲ್ಲಾ ಯೋಜನೆಗಳನ್ನು ಜಾರಿಗೆ ಮಾಡಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಿ ದ್ದಕ್ಕೆ ಶಿಕ್ಷಣ ಸಚಿವರು ಮಾತನಾಡಿ ಈ ಒಂದು ವಿಚಾರವನ್ನು ಪ್ರಸ್ತಾಪವನ್ನು ಮಾಡಿದ್ದಾರೆ. ವೇತನದಲ್ಲಿ ಒಂದಿಷ್ಟು ಹಣವನ್ನು ಕಡಿತ ಮಾಡಿ ಶಿಕ್ಷಕರಿಗೆ ವಿಮೆ ಯೋಜನೆಯನ್ನು ಜಾರಿಗೊಳಿ ಸುವ ಪ್ರಕ್ರಿಯೆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಯೋಜನೆ ಎನೋ ಸರಿಯಾಗಿದ್ದು ಶಿಕ್ಷಕರಿಗೆ ಅನುಕೂಲವಾಗಲಿ ಅವರ ಕುಟಂಬಕ್ಕೆ ನೆರ ವಾಗಲಿ ಆದರೆ ಶಿಕ್ಷಕರ ವೇತನ ಕಡಿತ ಮಾಡಿ ಈ ಒಂದು ಯೋಜನೆಯನ್ನು ನಿಡೋದು ಸರಿನಾ ಎಂಬ ಪ್ರಶ್ನೆ ಹುಟ್ಟುಕೊಂಡಿದ್ದು ಈ ಒಂದು ಕುರಿತಂತೆ ರಾಜ್ಯದ ಶಿಕ್ಷಕರ ಸಂಘಟನೆಯ ನಾಯಕರು ಶಿಕ್ಷಕರು ತಿಳಿದುಕೊಂಡು ಸಾಧಕ ಬಾಧಕಗಳ ಕುರಿತಂತೆ ತಿಳಿದುಕೊಳ್ಳಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..