ಬೆಂಗಳೂರು –
ಸಧ್ಯ ಲೋಕಸಭೆಯ ಚುನಾವಣೆಯ ಕಾವು ಈ ಒಂದು ಸಂದರ್ಭದಲ್ಲಿ ಚುನಾವಣಾ ಆಯೋಗ ವು ರಾಜ್ಯದ ಸರ್ಕಾರಿ ನೌಕರರಿಗೆ ಎಚ್ಚರಿಕೆಯ ಸಂದೇಶ ವೊಂದನ್ನು ನೀಡಿದೆ ಹೌದು ರಾಜ್ಯ ಸರ್ಕಾರಿ ನೌಕರರು ರಾಜಕೀಯ ಪಕ್ಷಗಳ ಪರವಾಗಿ ಸಂದೇಶಗಳನ್ನು ಸಾಮಾಜಿಕ ಮಾಧ್ಯ ಮಗಳಲ್ಲಿ ಹಂಚಿಕೊಳ್ಳುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ.
ಒಂದು ವೇಳೆ ಯಾವುದೇ ಪಕ್ಷದ ಪರವಾಗಿ ಸಂದೇಶವನ್ನು ಫಾರ್ವರ್ಡ್ ಮಾಡಿದ್ರೂ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಆಯೋಗವು ಸೂಚನೆ ನೀಡಿದೆ
ಸರ್ಕಾರಿ ಅಧಿಕಾರಿಯಾಗಿದ್ದೂ ಯಾವುದೇ ಪಕ್ಷದ ಪರವಾಗಿದ್ದಂತ ಸಂದೇಶ ಫಾರ್ವರ್ಡ್ ಮಾಡಿದರು ಕೂಡಾ ಅವರ ಮೇಲೆ ಸೂಕ್ತ ವಾದ ಕ್ರಮವನ್ನು ಕೈಗೊಳ್ಳುವ ಸೂಚನೆ ಯನ್ನು ಆಯೋಗವು ನೀಡಿದೆ. ಹೀಗೆ ಕಂಡು ಬಂದರೆ ಚುನಾವಣಾಧಿಕಾರಿಗಳಿಗೆ ದೂರು ನೀಡಬಹುದು ಎಂದು ಆಯೋಗವು ತಿಳಿಸಿದೆ
24 ಗಂಟೆಯೊಳಗೆ ಡಿಸಿ ಮಾಹಿತಿ ಒದಗಿಸಿ ದೂರಹ ಬಂದ ಕೂಡಲೇ ಅವರ ಮೇಲೆ ಪರಿಶೀಲನೆ ನಡೆಸಿ ಸೂಕ್ತವಾದ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಆಯೋಗದ ಆಯುಕ್ತರು ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..