ಬೆಂಗಳೂರು –
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಇಲಾಖೆಯ ಅಧಿಕಾರಿ ಗಳೊಂದಿಗೆ ತುರ್ತು ಸಭೆಯನ್ನು ಮಾಡಿದರು ಹೌದು ಬೆಂಗಳೂರಿನ ವಿಧಾನ ಸೌಧ ದಲ್ಲಿ ಮಹತ್ವದ ಸಭೆ ಮಾಡಿದ ಸಚಿವರು ಹೊಸ ಶೈಕ್ಷಣಿಕ ವರ್ಷದ ಆರಂಭ ಕುರಿತು ಅಧಿಕಾರಿ ಗಳೊಂದಿಗೆ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕ ರೊಂದಿಗೆ ಮಾಹಿತಿ ಪಡೆದುಕೊಂಡರು

2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳ ಪುನರಾರಂಭಕ್ಕೆ ಸಿದ್ಧತೆ,ಕಲಿಕಾ ಚೇತರಿಕೆ,ಸರ್ಕಾರಿ ಮಾದರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ವಿಚಾರಗಳ ಕುರಿತು ಜಿಲ್ಲೆ ಮತ್ತು ತಾಲೂಕು ಶಿಕ್ಷಣಾಧಿಕಾರಿ ಗಳು ಮತ್ತು ಸಿಆರ್‌ಪಿಗಳೊಂದಿಗೆ ಸಮಗ್ರ ಶಿಕ್ಷಣ ಕರ್ನಾ ಟಕ ಕಚೇರಿಯಿಂದ ವಿಡಿಯೊ ಕಾನ್ಫರೆನ್ಸ್ ನಡೆಸಲಾಯಿತು.