7ನೇ ವೇತನ ಆಯೋಗದ ಸೌಲಭ್ಯ ನೀಡಿ ನೌಕರರ ಪ್ರತಿಭಟನೆ – ಅನ್ಯಾಯ ಸರಿಪಡಿಸಲು ಆಗ್ರಹ CM ಗೆ ಪತ್ರ ಬರೆದು ಕಳುಹಿಸಿದ ನೌಕರರು…..

Suddi Sante Desk
7ನೇ ವೇತನ ಆಯೋಗದ ಸೌಲಭ್ಯ ನೀಡಿ ನೌಕರರ ಪ್ರತಿಭಟನೆ – ಅನ್ಯಾಯ ಸರಿಪಡಿಸಲು ಆಗ್ರಹ CM ಗೆ ಪತ್ರ ಬರೆದು ಕಳುಹಿಸಿದ ನೌಕರರು…..

ಬೀದರ್‌

ಏಳನೇ ವೇತನ ಆಯೋಗದ ಲೆಕ್ಕಾಚಾರದ ಪ್ರಕಾರ ಸೌಲಭ್ಯ ಕಲ್ಪಿಸಿಕೊಡಬೇಕೆಂದು ನಿವೃತ್ತ ಸರ್ಕಾರಿ ನೌಕರರು ಆಗ್ರಹಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗೆ ಸಲ್ಲಿಸಿ ಒತ್ತಾಯಸಿದರು.6ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿ.ಸಿ.ಆರ್.ಜಿ. ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣ, ಇತರೆ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ. ಅದರಿಂದ ನಿವೃತ್ತರಿಗೆ ಆರ್ಥಿಕ ನಷ್ಟ ಉಂಟಾಗಿ ಅನ್ಯಾಯವಾಗಿದೆ.

7ನೇ ವೇತನ ಆಯೋಗದ ಪ್ರಕಾರ ಸೌಲಭ್ಯ ಕಲ್ಪಿಸಿಕೊಡಬೇಕು. ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿದರು.ನಿವೃತ್ತ ನೌಕರರ ಬೀದರ್‌ ಜಿಲ್ಲಾ ಘಟಕದ ಸಂಚಾಲಕ ಬಾಬುರಾವ್‌ ಬಿರಾದಾರ, ಭೀಮಣ್ಣ ಹಡಪದ, ನರಸಪ್ಪ ಹಾಲೋಳ್ಳಿ, ರೇವಣಪ್ಪ ಪಾಟೀಲ, ವಿ.ಎಸ್. ಮಠ, ಈರಣ್ಣ ಲೋಣ, ಶಶಿಕಾಂತ, ಅನಿಲ ಕಮಠಾಣ, ಮುಹಮ್ಮದ್‌ ಅಹಮ್ಮದ್‌ ಹುಸೇನ್‌, ಅಂಬಾದಾಸ, ನರಸಪ್ಪ ಕೀರ್ತಿ, ವಿ.ಕೆ. ಖಪಲೆ, ಶಿವರಾಜ, ಮಾರುತಿ, ತಾತ್ಯಾರಾವ್‌, ಚುಕ್ಕಮ್ಮ, ಸರಸ್ವತಿ, ವೇದಮಣಿ, ಶಕುಂತಲಾ ಹಾಜರಿದ್ದರು.

 

ಸುದ್ದಿ ಸಂತೆ ನ್ಯೂಸ್ ಬೀದರ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.