ಧಾರವಾಡ –
ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿ ನತ್ತ ಪ್ರಯಾಣ ಬೆಳೆಸಿದ ನೌಕರರು – ಧಾರವಾಡ ಜಿಲ್ಲೆಯಿಂದಲೂ ಎಸ್ ಎಫ್ ಸಿದ್ದನಗೌಡರ ನೇತ್ರತ್ವದಲ್ಲಿ ಹೊರಟ ಸರ್ಕಾರಿ ನೌಕರರು
ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆಯ. ಲಿದೆ.ಐತಿಹಾಸಿಕವಾದ ಈ ಒಂದು ಕಾರ್ಯಕ್ರಮ. ದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗ ಳಿಂದ ಅಪಾರ ಸಂಖ್ಯೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಈಗಾಗಲೇ ಪ್ರಯಾಣವನ್ನು ಬೆಳಿಸಿ ದ್ದಾರೆ.ಸರ್ಕಾರಿ ಬಸ್ ಖಾಸಗಿ ಬಸ್ ಸೇರಿದಂತೆ ಹಲವಾರು ಬೇರೆ ಬೇರೆ ವಾಹನಗಳ ಮೂಲಕ ಹೊರಟಿದ್ದಾರೆ.
ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಶಕ್ತಿ ಪ್ರದರ್ಶನ ನಡೆಯಲಿದೆ.ಈಗಾಗಲೇ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ನೌಕರರ ಟೀಮ್ ತಂಡೋಪ ತಂಡವಾಗಿ ಪ್ರಯಾಣವನ್ನು ಬೆಳಿಸಿದ್ದು ಇನ್ನೂ ಇತ್ತ ಧಾರವಾಡ ದಿಂದಲೂ ಕೂಡಾ ಸರ್ಕಾರಿ ನೌಕರರು ಹೊರಟಿದ್ದಾರೆ.ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡರ ನೇತ್ರತ್ವದಲ್ಲಿ ಜಿಲ್ಲೆಯ ಸರ್ಕಾರಿ ನೌಕರರು ಪ್ರಯಾಣ ಬೆಳಿಸಿದ್ದಾರೆ.
ನಾಲ್ಕೈದು ಬಸ್ ಗಳಲ್ಲಿ ಸಾಮೂಹಿಕವಾಗಿ ಜಿಲ್ಲೆಯ ಸರ್ಕಾರಿ ನೌಕರರ ನಿಯೋಗವು ಬೆಂಗಳೂರಿನತ್ತ ಪ್ರಯಾಣವನ್ನು ಬೆಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..