ಹಾವೇರಿ –
ಹೃದಯಾಘಾತ ದಿಂದ ತಾಯಿಯನ್ನು ಕಳೆದುಕೊಂಡು ವಿದ್ಯಾರ್ಥಿ ಅಪಘಾತ ದಲ್ಲಿ ತಂದೆಯನ್ನು ಕಳೆದುಕೊಂಡ ವಿದ್ಯಾರ್ಥಿ ನಿ ನೋವಿನಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷೆ ಯನ್ನು ಇಬ್ಬರು ವಿದ್ಯಾರ್ಥಿಗಳು ಬರೆದಿದ್ದಾರೆ ಹೌದು ಹಾವೇರಿ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು ತಂದೆ,ತಾಯಿ ಸಾವಿನ ನೋವಿನಲ್ಲೂ ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ.ಇಂದು SSLC ಎರಡನೇ ದಿನದ ಇಂಗ್ಲಿಷ್ ಭಾಷೆಯ ಪರೀಕ್ಷೆ ಇತ್ತು ಪೋಷಕರ ಸಾವಿನ ನೋವಿನಲ್ಲೂ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಹಿರೆಕೇರೂರು ಪಟ್ಟಣದ ಸಂಗಮೇಶ್ವರ ಕಾಲೇಜಿನಲ್ಲಿ ಪರೀಕ್ಷೆ ಬರೆದ ಮಧು ಅಡಗಂಟಿ ಎಂಬ ವಿದ್ಯಾರ್ಥಿನಿ.ತಂದೆಯ ಸಾವಿನ ಸುದ್ದಿ ತಿಳಿದು ನೋವಿನಲ್ಲೇ ಪರೀಕ್ಷೆ ಬರೆದಿದ್ದಾರೆ.
ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಿಸದೆ ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ ತಂದೆ ಸಾವನ್ನಪ್ಪಿದ್ದು ಪರೀಕ್ಷೆ ಮುಗಿಸಿ ಹೊರ ಬರುತ್ತಿದ್ದಂತೆ ತಂದೆ ನೆನೆದು ವಿದ್ಯಾರ್ಥಿನಿ ಕಣ್ಣೀರಿಟ್ಟಿದ್ದಾರೆ.
ಇತ್ತ ಮತ್ತೊಂದು ಘಟನೆಯಲ್ಲಿ ಹೃದಯಾಘಾತದಿಂದ ತಾಯಿ ನಿಧನರಾಗಿದ್ದು ಆ ನೋವಲ್ಲೇ ಮಗ ಪರೀಕ್ಷೆ ಬರೆದಿದ್ದಾನೆ. ಶಿಗ್ಗಾವಿ ತಾಲ್ಲೂಕಿನ ಹನುಮರಹಳ್ಳಿ ಗ್ರಾಮದ ವಿದ್ಯಾರ್ಥಿ ಯಶವಂತ ಜೆಎಂಜೆ ಪ್ರೌಢಶಾಲೆಯಲ್ಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಬಂದು ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದಿದ್ದಾನೆ.ನಂತರ ತಾಯಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾನೆ.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಹನುಮರಹಳ್ಳಿ ಗ್ರಾಮದ ವಿದ್ಯಾರ್ಥಿ ಯಶವಂತ ಉಮೇಶ ಸಂಶಿ ಅವರ ತಾಯಿ ಸರಸ್ವತಿ ಉಮೇಶ ಸಂಶಿ (40)
ಹೃದಯಾಘಾತದಿಂದ ನಿಧನರಾಗಿದ್ದಾರೆ.ಮಗುವಿನ ತಾಯಿ ನಿಧನರಾದ ಸುದ್ದಿ ತಿಳಿದ ಬಿಇಒ ಅವರ ತಂಡ ವಿದ್ಯಾರ್ಥಿಗೆ ಆತ್ಮಸ್ಥೈರ್ಯ ಮೂಡಿಸಿದ್ದಾರೆ. ಪರೀಕ್ಷೆ ಬರೆಯುವಂತೆ ಮನವರಿಕೆ ಮಾಡಿದರು. ಅದರಿಂದ ಪ್ರೇರಿತನಾದ ವಿದ್ಯಾರ್ಥಿ ಯಶವಂತ ಪರೀಕ್ಷೆ ಬರೆದು ತಾಯಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ.
ಮಗನ ವ್ಯಾಸಂಗ ಹಾಳಾಗಬಾರದು ಎಂಬ ಉದ್ದೇಶದಿಂದ ಪರೀಕ್ಷೆ ಬರೆಯಲು ಹೋಗುವಂತೆ ಮನವರಿಕೆ ಮಾಡಿದ್ದೇನೆ ಅದರಂತೆ ಮಗ ಪರೀಕ್ಷೆ ಬರೆಯಲು ಹೋಗಿದ್ದಾನೆ ಎಂದು ಭಾವುಕರಾಗಿ ವಿದ್ಯಾರ್ಥಿ ತಂದೆ ಹೇಳಿದರು