ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೆ ಮತ್ತೆ ನಿರಾಶೆ ಮಾಡಿದ ಬಜೆಟ್ – ಮಧ್ಯಂತರ ಪರಿಹಾರ ದೊಂದಿಗೆ ವೇತನ ಆಯೋಗ ಸಿಗುತ್ತದೆ ಎಂದುಕೊಂಡಿದ್ದ ನೌಕರರ ನಿರೀಕ್ಷೆ ಹುಸಿ
ಈ ಬಜೆಟ್ ನಲ್ಲಾದರೂ ಎಲ್ಲಾ ಸಮುದಾಯದ ಹಾಗೆ ನಮಗೂ ಕೂಡಾ ವೇತನ ಪರಿಷ್ಕ್ರರಣೆ ವಿಚಾರದಲ್ಲಿ 7ನೇ ವೇತನ ಆಯೋಗ ಸಿಗುತ್ತದೆ ನಮಗೂ ಬಜೆಟ್ ನಲ್ಲಿ ಬಂಪರ್ ಗಿಪ್ಟ್ ನ್ನು ಮುಖ್ಯಮಂತ್ರಿಯವರು ನೀಡುತ್ತಾರೆ ಎಂದು ಕೊಂಡಿದ್ದ ರಾಜ್ಯದ ಸರ್ಕಾರಿ ನೌಕರರಿಗೆ ಮತ್ತೆ ಬಜೆಟ್ ನಿರಾಶೆಯನ್ನುಂಟು ಮಾಡಿದೆ.
ಹೌದು ಇಂದು ಮಂಡನೆಯಾದ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಸರ್ಕಾರಿ ನೌಕರರಿಗೆ ಯಾವುದೇ ಸಿಹಿ ಸುದ್ದಿಯನ್ನು ನೀಡಿಲ್ಲ ಈ ಹಿಂದೆ ಹೇಳಿದ ಮಾತುಗಳನ್ನೇ ಬಜೆಟ್ ಪ್ರತಿಯಲ್ಲಿ ಉಲ್ಲೇಖವನ್ನು ಮಾಡಿ ದ್ದಾರೆ.
ಸಧ್ಯ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ವಿಚಾರದಲ್ಲಿ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದ್ದು ವರದಿ ಬಂದ ಕೂಡಲೇ ಪರಿಶೀಲನೆ ಮಾಡಿ ಸೂಕ್ತವಾದ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.ಈ ಹಿಂದೆ ಕೂಡಾ ಇದನ್ನೇ ಮುಖ್ಯಮಂತ್ರಿಯವರು ಹೇಳಿದ್ದರು ಮತ್ತೆ ಈ ಒಂದು ವಿಚಾರವನ್ನು ಬಜೆಟ್ ನಲ್ಲಿ ಪ್ರಸ್ತಾಪ ಮಾಡಿದ್ದಾರೆ ಇದರಿಂದಾಗಿ ಬೆಟ್ಟದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ನಿರಾಶೆ ಯಾಗಿದೆ.
ಹೀಗಾಗಿ ರಾಜ್ಯ ಬಜೆಟ್ ಸರ್ಕಾರಿ ನೌಕರರಿಗೆ ಕಹಿಯಾಗಿದ್ದು ರಾಜ್ಯದ ಸರ್ಕಾರಿ ನೌಕರರಿಗೆ ಮತ್ತೆ ನಿರಾಶೆಯನ್ನುಂಟು ಮಾಡಿದೆ ಬಜೆಟ್.ಹೀಗಾಗಿ ಸರ್ಕಾರಿ ನೌಕರರಿಗೆ ಮತ್ತೆ ನಿರಾಸೆಯಾಗಿದ್ದು ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಮ್ಮೆ ಬೇಸರಗೊಂಡಿದ್ದಾರೆ.
ಮಧ್ಯಂತರ ಪರಿಹಾರದೊಂದಿಗೆ ವೇತನ ಪರಿಷ್ಕರಣೆಯಾಗಲಿದೆ ಎಂಬ ನಿರೀಕ್ಷೆ ಹುಸಿ ಯಾಗಿದೆ.ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿ ರುವ ಸಿದ್ದರಾಮಯ್ಯನವರು 7ನೇ ವೇತನ ಆಯೋಗದ ವರದಿ ಸ್ವೀಕರಿಸಿದ ಬಳಿಕ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಕ್ರಮ ವಹಿಸುವು ದಾಗಿ ಭರವಸೆ ನೀಡಿದ್ದಾರೆ.
ಹೀಗಾಗಿ ರಾಜ್ಯ ಸರ್ಕಾರಿ ನೌಕರರು ಸಧ್ಯ ಮಹಾ ಸಮ್ಮೇಳನದ ಕಾರ್ಯದಲ್ಲಿ ತೊಡಗಿದ್ದು ಮುಂದೆ ಏನೇನು ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಏನು ಮಾಡಲಿದ್ದಾರೆ ಎಂಬೊದನ್ನು ಕಾದು ನೋಡ ಬೇಕಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..