ಉತ್ತರಕನ್ನಡ –
ಎಂತಹ ವಿಚಿತ್ರ ಕಾಲ ಬಂತು ನೋಡಿ. ಹೆತ್ತ ಮಕ್ಕಳ ನ್ನು ಯಾವ ಯಾವುದಕ್ಕೆ ಉಪಯೋಗ ಮಾಡತಾರೆ ಎಂಬೊದಕ್ಕೆ ಈ ಒಂದು ಘಟನೆಯೇ ಸಾಕ್ಷಿ. ಇಲ್ಲೊ ಬ್ಬ ಪಾಪಿ ತಂದೆ ತನ್ನ ಹೆತ್ತ ಮಗಳನ್ನು ಮಾಟ ಮಂತ್ರ ಕ್ಕಾಗಿ ಉಪಯೋಗಿಸಿ ಬಲಿ ಕೊಟ್ಟಿದ್ದಾರೆ.

ಹೌದು ಇಂಥದೊಂದು ಘಟನೆ ಕಾರವಾರ ಜಿಲ್ಲೆಯ ಲ್ಲಿ ನಡೆದಿದೆ.ಉತ್ತರ ಕನ್ನಡ ದಲ್ಲಿ ಮಾಟ-ಮಂತ್ರದ ಉದ್ದೇಶಕ್ಕಾಗಿ 13 ವರ್ಷದ ಮಗಳನ್ನೇ ಬಲಿಕೊಟ್ಟಿ ದ್ದ ಆರೋಪಿಯೊಬ್ಬ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಕೇರಳ ಪೊಲೀಸರಿಗೆ ಬೇಕಾಗಿದ್ದ ಈ ಆರೋಪಿಯ ನ್ನು ಕರ್ನಾಟಕ ಪೊಲೀಸರ ನೆರವಿನಿಂದ ಕಾರವಾರ ದಲ್ಲಿ ಬಂಧಿಸಲಾಗಿದೆ.ಕೇರಳದ ಸನು ಮೋಹನ್ ಬಂಧಿತ ಆರೋಪಿಯಾಗಿದ್ದಾನೆ.ವೃತ್ತಿಯಲ್ಲಿ ಪ್ರಾಥ ಮಿಕ ಶಾಲಾ ಶಿಕ್ಷಕನಾಗಿದ್ದು ಗಂಡು ಮಗನಿಗಾಗಿ ಹೆತ್ತ ಮಗಳನ್ನೇ ಈ ನಲ್ವತ್ತು ವರ್ಷದ ಈತ ಮಾಟ- ಮಂ ತ್ರದ ಉದ್ದೇಶಕ್ಕಾಗಿ ತನ್ನ 13 ವರ್ಷದ ಮಗಳನ್ನೇ ಬಲಿ ನೀಡಿದ್ದಾನೆ

ಈ ಸಂಬಂಧ ತ್ರಿಕ್ಕಾಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಆದರೆ ಆರೋಪಿ ತಲೆಮರೆಸಿ ಕೊಂಡಿದ್ದ. ಈತನ ಪತ್ತೆಗಾಗಿ ಕೇರಳ ಪೊಲೀಸರು ಲುಕ್ಔಟ್ ನೋಟಿಸ್ ನೀಡಿದ್ದರು.ಆರೋಪಿಯ ಮೊಬೈಲ್ ಫೋನ್ ನೆಟ್ ವರ್ಕ್ ಆಧಾರದ ಮೇರೆಗೆ ಈತ ಕರ್ನಾಟಕದ ಕಾರವಾರ ಪ್ರದೇಶದಲ್ಲಿ ಇರುವು ದು ಸುಳಿವು ತಿಳಿದ ಪೊಲೀಸರು,ಕರ್ನಾಟಕ ಪೊಲೀ ಸರ ನೆರವು ಕೋರಿದ್ದರು.ಬಳಿಕ ಕರ್ನಾಟಕ ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ನಂತರ ಈತನನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.