ರಾಮನಗರ –
ಪ್ರೇಮಿಗಳ ದಿನಕ್ಕೆ ಇನ್ನೇನು ಮೂರೇ ದಿನ ಬಾಕಿ ಇದೆ.ಈಗಾಗಲೇ ಎಲ್ಲೆಡೆ ಪ್ರೇಮಿಗಳು ದಿನಾಚರಣೆ ಹೇಗೆ ಮಾಡಬೇಕು ಎಲ್ಲಿಗೆ ಹೋಗಬೇಕು ಹೇಗೆ ಆಚರಿಸಬೇಕು ಹೀಗೆ ಪ್ಲಾನ್ ಮಾಡಿಕೊಳ್ಳತಾ ಇದ್ದಾರೆ. ಇವೆಲ್ಲದರ ನಡುವೆ ಇಲ್ಲೊಬ್ಬ ವಿದ್ಯಾರ್ಥಿ ಪ್ರೇಮಿಗಳು ದಿನಾಚರಣೆಗೆ ಹಿನ್ನಲೆಯಲ್ಲಿ ನನಗೆ ಹುಡುಗಿಯರ ಕಾಟ ತಡಿಯೊಕೆ ಆಗೊದಿಲ್ಲ ರಜೆ ಕೊಡಿ ಎಂದು ಪ್ರಾಚಾರ್ಯರಿಗೆ ಪತ್ರ ಬರೆದಿದ್ದಾನೆ.
ಹೌದು ಇಂಥಹದೊಂದು ಪತ್ರ ಬರೆದ ವಿದ್ಯಾರ್ಥಿ ಹೆಸರು ಶಿವರಾಜ್ . ಚಾಮರಾಜನಗರದ ಕೊಳ್ಳೇಗಾಲ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಎರಡನೇ ವರ್ಷದ ವಿದ್ಯಾರ್ಥಿ ಶಿವರಾಜ್.
ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ.ನನಗೆ ಹುಡುಗಿಯರ ಕಾಟವನ್ನು ತಡಿಯೋಕೆ ಆಗೊದಿಲ್ಲ ಹೀಗಾಗಿ ನನಗೆ ಐದು ದಿನಗಳ ಕಾಲ ರಜೆ ಕೊಡಿ ಎಂದು ಕಾಲೇಜು ಪ್ರಾಚಾರ್ಯರಿಗೆ ರಜೆ ಕೇಳಿ ಪತ್ರ ಬರೆದಿದ್ದಾರೆ.
ದಿನಾಚರಣೆ ಹಿನ್ನಲೆಯಲ್ಲಿ ನನಗೆ ಹುಡುಗಿಯರ ಕಾಟ ತಡೆಯಲು ಆಗೊದಿಲ್ಲ ಹೀಗಾಗಿ 5 ದಿನ ರಜೆ ನೀಡಬೇಕೆಂದು ಕೊಳ್ಳೆಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಸೀಗನಾಯಕ ಅವರಿಗೆ ಪತ್ರ ಬರೆದು ಕೊಟ್ಟಿದ್ದಾರೆ.
ಬಿಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಿವರಾಜು ರಜೆ ನೀಡಬೇಕಾಗಿ ವಿನಂತಿ ಮಾಡುತ್ತೇನೆ ಎಂದು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ. ಅನುಮತಿಯನ್ನು ತಗೆದುಕೊಂಡಿದ್ದಾನೆ.
14 ರಂದು ಪ್ರೇಮಿಗಳ ದಿನ ಹೀಗಾಗಿ 5 ದಿನ ರಜೆ ನೀಡಬೇಕೆಂದು ಶಿವರಾಜ್ ಕೇಳಿದ್ದು,ಇದಕ್ಕೆ ಪ್ರಾಂಶುಪಾಲರು ಒಪ್ಪಿಗೆ ಸೂಚಿಸಿದ್ದಾರೆ.
ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹುಡುಗನಿಗೆ ಯಾವ ರೀತಿ ಹುಡುಗಿಯರು ಕಾಟ ಕೊಡ್ತಾರೇ ಅನ್ನೋದನ್ನು ಅವನೇ ಹೇಳಬೇಕಿದೆ.ಏನೇ ಆಗಲಿ ಶಿವರಾಜ್ ಐದು ದಿನ ರಜೆ ಕೇಳಿದ ಪತ್ರ ಈಗ ಸಖತ್ ವೈರಲ್ ಅಗಿದೆ