ಕಲಬುರ್ಗಿ –
ಹೊಸ ವರ್ಷದ ಆಚರಣೆ ಮಾಡುತ್ತಿದ್ದ ಯುವಕನಿಗೆ ಮನೆಯ ಮುಂದೆ ಚಾಕು ಇರಿದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಮೃತರಾದ ಘಟನೆ ಕಲಬುರಗಿ ಯಲ್ಲಿ ನಡೆದಿದೆ.ಹೌದು ಹೊಸ ವರ್ಷಾಚರಣೆ ಮಾಡ್ತಿದ್ದ ಯುವಕನಿಗೆ ಚಾಕು ಇರಿತ ಮಾಡಿದ ಘಟನೆ ನಡೆದಿತ್ತು
ಕಲಬುರ್ಗಿ ನಗರದ ಭವಾನಿ ನಗರದಲ್ಲಿ ಈ ಒಂದು ಘಟನೆ ನಡೆದಿತ್ತು.ಭವಾನಿ ನಗರದ ಸುರೇಶ್ ಮತ್ತು ಆತನ ಸ್ನೇಹಿತ ರಿಂದ ಈ ಒಂದು ಕೃತ್ಯ ನಡೆದಿದೆ ಎನ್ನಲಾಗಿದೆ.ಹೊಸ ವರ್ಷ ಹಿನ್ನೆಲೆ ಸೌಂಡ್ ಬಾಕ್ಸ್ ಹಚ್ಚಿ ಡಾನ್ಸ್ ಮಾಡುತ್ತಿದ್ದ ಯುವಕ
ಚಾಕು ಇರಿತದ ನಂತರ ತೀವ್ರವಾಗಿ ಗಾಯಗೊಂಡ ಯುವ ಚಿಕಿತ್ಸೆ ಫಲಿಸದೆ ಯುವಕ ಸಾವಿಗೀಡಾಗಿದ್ದಾನೆ.ಮಲ್ಲಿಕಾ ರ್ಜುನ (23)ಮೃತ ಯುವಕನಾಗಿದ್ದಾನೆ.
ತೀರ್ವವಾಗಿ ಗಾಯಗೊಂಡಿದ್ದ ಮಲ್ಲಿಕಾರ್ಜುನನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಮಲ್ಲಿಕಾರ್ಜುನ.ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ದೂರನ್ನು ಸ್ವೀಕರಿಸಿದ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ