ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರು ಯಾವುದೇ ರೀತಿಯ ಆತಂಕ ವನ್ನು ಪಡಬಾರದು ಕೇಂದ್ರ ಸರ್ಕಾರದ ಮಾದರಿಯ ವೇತನಕ್ಕಾಗಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಸಮಿತಿ ಯೊಂದ ನ್ನು ರಚನೆ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.ಬೆಂಗಳೂರಿನಲ್ಲಿ ಮಾತನಾ ಡಿದ ಅವರು ಈ ಕುರಿತಂತೆ ಎಲ್ಲರಲ್ಲೂ ಸಾಕಷ್ಟು ರೀತಿ ಯಲ್ಲಿ ಗೊಂದಲಗಳಿದ್ದು ಯಾವುದೇ ರೀತಿಯ ಆತಂಕ ಗೊಂದಲವನ್ನು ರಾಜ್ಯ ಸರ್ಕಾರಿ ನೌಕರರು ಮಾಡಿಕೊ ಳ್ಳದೇ ಈ ಕುರಿತಂತೆ ರಾಜ್ಯ ಸರ್ಕಾರ ಇದನ್ನು ಗಂಭೀರ ವಾಗಿ ತಗೆದುಕೊಂಡಿದ್ದು ಹೀಗಾಗಿ ಸಮಿತಿಯೊಂದನ್ನು ರಚನೆ ಮಾಡಲಿದೆ ಎಂದರು.

ಇನ್ನೂ ಮಹಾಮಾರಿ ಕರೋನಾ ಸಂಕಷ್ಟದಲ್ಲಿ ತಮ್ಮ ಜೀವದ ಹಂಗನ್ನು ತೋರೆದು ರಾಜ್ಯದ ಸರ್ಕಾರಿ ನೌಕರರು ಕರ್ತವ್ನವನ್ನು ಮಾಡಿದ್ದಾರೆ ಹಾಗೇ ಇವರ ಉತ್ತಮವಾದ ಕಾರ್ಯದಿಂದ ದೇಶದಲ್ಲಿಯೇ ರಾಜ್ಯ ಗುರುತಿಸಿಕೊಂಡಿದ್ದು ಹೀಗಾಗಿ ಯಾವುದೇ ಕಾರಣಕ್ಕೂ ಈ ಒಂದು ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಈ ಕುರಿತಂತೆ ಮುಖ್ಯ ಮಂತ್ರಿ ಕೂಡಾ ನಮ್ಮೊಂದಿಗೆ ಮಾತನಾಡಿ ಭರವಸೆಯನ್ನು ನೀಡಿದ್ದಾರೆ ಎಂದರು.
ಇನ್ನೂ ಶೀಘ್ರದಲ್ಲೇ ಸಮಿತಿ ರಚನೆಯಾಗಲಿದ್ದು ಇದರೊಂ ದಿಗೆ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರದ ಮಾದರಿಯ ವೇತನವು ಸಿಗಲಿದೆ ಎಂಬ ಭರವಸೆಯ ಮಾತನ್ನು ಹೇಳಿದರು.