ಬಾಗಲಕೋಟೆ – ಅಲ್ಲಿ ಓರ್ವ ಬ್ಯಾಂಕ್ ಪಿಗ್ಮಿ ಎಜೆಂಟ್ ರಾತ್ರೋರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದ. ಆದರೆ ಅಂದು ಆತನ ಜೊತೆ ಮಾಜಿ ಶಾಸಕನ ಬೆಂಬಲಿಗರು ಹಾಜರಿದ್ದರು.ಇದರಿಂದ ಸ್ಥಳದಲ್ಲಿದ್ದವರ ಮೇಲೆ ಕೇಸ್ ದಾಲಾಗಿತ್ತು. ಪೊಲೀಸರು ಅವರನ್ನು ವಿಚಾರಣೆಗೆ ಕರೆದಿದ್ದರು.ಆದರೆ ಅವರು ಜಾಮೀನು ಪಡೆದಿದ್ದು,ವಿಚಾರಣೆಗೆ ಹಾಜರಾಗಿರಲಿಲ್ಲ.ಪುನಃ ನೊಟೀಸ್ ನೀಡಿ ವಿಚಾರಣೆಗೆ ಕರೆದಾಗ ಮಾಜಿ ಶಾಸಕ ಠಾಣೆಗೆ ನುಗ್ಗಿ ಆವಾಜ್ ಹಾಕಿದ್ದಾನೆ.
ಬೇಲ್ ತಂದರೂ ಯಾಕೆ ಕರೆಸುತ್ತೀರಾ ಎಂದು ಸಿಪಿಐ ಗೆ ನಿಂದಿಸಿದ್ದಲ್ಲದೆ,ಠಾಣೆ ಬಿಟ್ಟು ಹೊರಗೆ ಬಾ ಎಂದು ಧಮಕಿ ಹಾಕಿದ್ದಾನೆ. ಮಾಜಿ ಶಾಸಕನಾಗಿ ಮನಬಂದಂತೆ ಮಾತಾಡಿ ತನ್ನ ನಡತೆಯನ್ನು ಪ್ರದರ್ಶನ ಮಾಡಿದ್ದಾನೆ. ಸಿಪಿಐ ಗೆ ಮನಬಂದಂತೆ ಏಕವಚನದಲ್ಲಿ ಆವಾಜ್ ಹಾಕಿ ಠಾಣೆ ಬಿಟ್ಟು ಹೊರಗೆ ಬಾ ನೋಡಿಕೊಳ್ತಿನಿ ಎಂದು ಧಮಕಿ ಹಾಕಿದ್ದಾರೆ.ಹೇ ಮಿಸ್ಟರ್ ಇವರಿಗೆ ಏನು ವಿಚಾರಣೆ ಮಾಡ್ತಿಯಾ ,ನಿ ಏನ್ ಪೊಲೀಸ್ ಕೆಲಸ ಮಾಡ್ತಿಲೆ ನಿನ್ ಸಸ್ಪೆಂಡ್ ಮಾಡಿಸ್ತೀನಿ.
ಹೀಗಂತ ಬಾಗಲಕೋಟೆ ಜಿಲ್ಲೆ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಿಪಿಐ ಅವರಿಗೆ ಆವಾಜ್ ಹಾಗೂ ಧಮಕಿ ಹಾಕಿದ ಆರೋಪಕ್ಕೆ ಒಳಗಾಗಿದ್ದಾರೆ. ಇಳಕಲ್ ಡಿಸಿಸಿ ಬ್ಯಾಂಕ್ ಪಿಗ್ಮಿ ಎಜೆಂಟ್ ಬಸವರಾಜ ಬಿರಾದಾರ ಅಕ್ಟೋಬರ್ 27 ರಂದು ಅನುಮಾನಾಸ್ಪದವಾಗಿ ಸಾವೀಗೀಡಾಗಿದ್ರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಇಳಕಲ್ ನಗರ ಠಾಣೆ ಪೊಲೀಸರು ತನಿಖೆ ನಡೆಸಿದ್ರು.ಈ ಬಗ್ಗೆ ಮಂಜುನಾಥ ಗೊಂದಿ, ಇಳಕಲ್ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಬಿ.ಎಸ್. ಪಾಟೀಲ್ ಸೇರಿ ಇತರ ೯ ಜನರ ಮೇಲೆ ಕೇಸ್ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗಲು ಬೆಂಬಲಿಗರಿಗೆ ನೊಟೀಸ್ ನೀಡಿದ್ದಕ್ಕೆ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನಿನ್ನೆ ಇಳಕಲ್ ಠಾಣೆಗೆ ನುಗ್ಗಿ ಸಿಪಿಐ ಅಯ್ಯನಗೌಡ ಪಾಟೀಲ ಹಾಗೂ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ.
ಇಳಕಲ್ ಠಾಣೆಯ ಸಿಪಿಐ ಅಯ್ಯನಗೌಡ ಪಾಟೀಲ ಜೊತೆ ವಾಗ್ವಾದ ಮಾಡಿದ ಕಾಶಪ್ಪನವರ ಮನಬಂದಂತೆ ನಿಂದಿಸಿದ್ದಾರೆ ಎಂದು ಸಿಪಿಐ ಅಯ್ಯನಗೌಡ ದೂರಿನ ಮೇರೆಗೆ ಕಾಸಯಪ್ಪನವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ. ಕರ್ತವ್ಯಕ್ಕೆ ಅಡ್ಡಿ,ನಿಂದನೆ,ಧಮಕಿ ಹಿನ್ನೆಲೆ ಕಲಂ 143, 147, 353, 504, 506 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಹೆ ಮಿಸ್ಟರ್ ಇವರಿಗೆ ಏನ್ ವಿಚಾರಣೆ ಮಾಡ್ತಿಯಾ?
ಜಾಮೀನು ಪತ್ರ ತೆಗೆದುಕೊಂಡು ಕಳಿಸೋದು ಅಷ್ಟೇ ನಿನ್ನ ಕೆಲಸ. ಅವರಿಗ್ಯಾಕೆ ನೊಟೀಸ್ ಕೊಡ್ತಿಯಾ. ಯಾರೂ ನೊಟೀಸ್ ತಗೊಬ್ಯಾಡ್ರಿಲೆ ಇದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಡೈಲಾಗ್ ಎಂದು ಬೆಂಬಲಿಗರಿಗೆ ಹೇಳುತ್ತಾ ಠಾಣೆಯಲ್ಲಿ ಗಲಾಟೆ ಮಾಡಿ ಕಾಶಪ್ಪನವರ ಹೆ ಮಗನೆ ಕಾನೂನು ಮಾಡುವವನು ನಾನು. ನಿ ಏನು ಕಾನೂನಿನ ಬಗ್ಗೆ ಹೇಳ್ತಿಯಾ ಇವರ್ಯಾರು ಇನ್ನು ಮುಂದೆ ವಿಚಾರಣೆಗೆ ಬರೋದಿಲ್ಲ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಸಿಪಿಐ ಅಯ್ಯನಗೌಡ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.ಸಧ್ಯ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದೇನು ಮಾಡ್ತಾರೆ ಎಂಬುದನ್ನು ಕಾದು ನೋಡಬೇಕು.