ಬೆಂಗಳೂರು –

ಶಾಲೆಗಳ ಆರಂಭದ ಕುರಿತು ಸೋಮವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.ಬೆಂಗಳೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಶಾಲೆಗಳನ್ನು ಆರಂಭಿಸಬೇಕೆಂಬ ಬೇಡಿಕೆ ಇದೆ ಎಂದರು.

ಈ ಕುರಿತು ತಜ್ಞರ ಸಮಿತಿ ಕೂಡ ತನ್ನ ಶಿಫಾರಸ್ಸು ಗಳನ್ನು ನೀಡಿದೆ.ಆರೋಗ್ಯ ಇಲಾಖೆಯ ಅಧಿಕಾರಿ ಗಳ ಜೊತೆ ಚರ್ಚಿಸಿದ ಬಳಿಕ ತೀರ್ಮಾನಕ್ಕೆ ಬರಲಾ ಗುವುದು.ಈ ಸಂಬಂಧ ಸೋಮವಾರ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದರು.ಇನ್ನೂ ವಿದ್ಯಾ ಗಮ ಯೋಜನೆ ಜಾರಿಯಲ್ಲಿದೆ. ಕಲಿಕಾ ದಿನಚರಿ ಯ ಬಗ್ಗೆಯೂ ಯೋಜನೆ ರೂಪಿಸಲಾಗಿದೆ.ಶಾಲಾ ತರಗತಿ ಆರಂಭದ ಕುರಿತು ನಿರ್ಧಾರ ಕೈಗೊಳ್ಳುವು ದು ಬಾಕಿ ಇದೆ ಎಂದರು.ಇನ್ನೂ 15 ತಿಂಗಳಿಂದ ಶಾಲಾ ತರಗತಿಗಳು ನಡೆದಿಲ್ಲ.ತರಗತಿ ಆರಂಭಿಸು ವಂತೆ ಪೋಷಕರಿಂದ ಬೇಡಿಕೆ ಇದೆ.ಆದಷ್ಟು ಬೇಗ ಈ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಾ ಸಚಿವರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದರು.