This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಅರ್ಧಕ್ಕೆ ನಿಂತುಕೊಂಡಿದ್ದ ಗುರು ಭವನಕ್ಕೆ ಪೂಜೆ ಸಲ್ಲಿಸಿ ಚಾಲನೆ ರಾಜ್ಯಕ್ಕೆ ಮಾದರಿ ಗುರುಭವನ ನಿರ್ಮಾಣ ನಿರ್ಮಿಸುವ ಗುರಿ…..

WhatsApp Group Join Now
Telegram Group Join Now

ವಿಜಯಪುರ –

ರಾಜ್ಯಕ್ಕೆ ಮಾದರಿಯಾಗುವ ಗುರುಭವನ ನಿರ್ಮಾಣ ಗುರಿಯನ್ನು ಹೊಂದಿದ್ದೇವೆ ಎಂದು ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು ವಿಜಯಪುರ ದಲ್ಲಿ ಅರ್ಧಕ್ಕೆ ನಿಂತುಕೊಂಡಿದ್ದ ಗುರುಭವನ ಕಾಮಗಾರಿ ಗೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ಜಿಲ್ಲಾ ಶಿಕ್ಷಕರ ಗುರುಭವನದ ಬಾಕಿ ಉಳಿದ ಕಾಮಗಾರಿ ಯ ಭೂಮಿ ಪೂಜೆ ಕಾರ್ಯಕ್ರಮ ಜರುಗಿತು.

ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ 2003 ರಲ್ಲಿ ಪ್ರಾರಂಭಿಸಿ ಅರ್ಧಕ್ಕೆ ನಿಂತ ಕಾಮಗಾರಿಗೆ ನಗರದ ಶಾಸಕರು ಮುತುವರ್ಜಿವಹಿಸಿ 20 ಲಕ್ಷ ರೂಪಾಯಿ ಬಿಡುಗಡೆಗೊಳಿಸಿ ಶಿಕ್ಷಕರ ಸಮ್ಮುಖದಲ್ಲಿ ಕೆಲಸಕ್ಕೆ ಚಾಲನೆ ನೀಡಿದರು.

ಗುರು ಭವನದ ನೆಲ ಮಹಡಿ ಹಾಗೂ ಮೊದಲನೆ ಮಹಡಿ ಪೂರ್ಣಗೊಳ್ಳಲು ಬೇಕಾಗುವ ಹಣವನ್ನು ವಿವಿಧ ಇಲಾಖೆ ಯಿಂದ ಕಾಳಜಿವಹಿಸಿ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಘೋಷಿಸಿದರು.ಸ್ಥಳದಲ್ಲೇ ಇದ್ದ ಸಂಬಂಧಿಸಿದ ಗುತ್ತಿಗೆದಾರರಿಗೆ ಗುಣಮಟ್ಟದ ಕಟ್ಟಡ ನಮ್ಮದಾಗಬೇಕು.ದೂರದ ಊರಿನಿಂದ ಬರುವ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಹಾಗೂ ಇಲಾಖೆ ನಿಗದಿಪಡಿಸುವ ಕಾರ್ಯಾಗಾರಕ್ಕೆ ಬಳಕೆಯಾಗಲು ಅತಿ ಕಡಿಮೆ ಅವಧಿ ಯಲ್ಲಿ ಮುಗಿಸಿ ಮುಂಬರುವ ಶಿಕ್ಷಕ ದಿನಾಚರಣೆಯು ಗುರುಭವನದಲ್ಲಿ ಆಚರಿಸುವಂತಾಗಬೇಕೆಂದು ನಿರ್ದೇಶನ ನೀಡಿದರು.

ಕಟ್ಟಡ ಮುಗಿಯುವರೆಗೂ ಗುರುಭವನ ಸಮಿತಿಯವರು ಶಿಕ್ಷಕ ಸಂಘದವರು ಹಗಲಿರುಳು ಶ್ರಮಿಸಿ, ಗುಣಮಟ್ಟದ ಭವನ ವಾಗುವಂತೆ ನೋಡಿಕೊಳ್ಳಲು ಜವಾಬ್ದಾರಿ ವಹಿಸು ವಂತೆ ನಿರ್ದೇಶಿಸಿದರು.ನಂತರದಲ್ಲಿ ಹಮ್ಮಿಕೊಂಡ ಸಭೆ ಯಲ್ಲಿ ಮಾತನಾಡುತ್ತಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿ ಸುವಲ್ಲಿ ಪ್ರಾಮಾಣಿಕ ಯತ್ನ ಮಾಡುವುದಾಗಿ ತಿಳಿಸುತ್ತಾ ಪ್ರತಿಯೊಬ್ಬ ಶಿಕ್ಷಕರು ತಮ್ಮ ಕರ್ತವ್ಯ ಪ್ರಜ್ಞೆ ಮಾಡುವದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ತಿಳಿಸಿ ದರು.ಡಿಡಿಪಿಐ ಹೊಸೂರ ಅವರು ಮಾತನಾಡುತ್ತಾ ನಗರ ವಲಯದ ಶಾಲೆಗಳಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣ ವಾಗಲು ಮಹಾನಗರ ಪಾಲಿಕೆಯ ಹಾಗೂ ಶಾಸಕರ ಮೂಲದ ಹಣ ನೀಡಲು ವಿನಂತಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಯಾದ ಜಗದೀಶ ಬೋಳಸೂರ ಗುರು ಭವನದ ಸಂಪೂರ್ಣ ವಿವರವನ್ನು ನೀಡಿ ಗುರು ಭವನದ ಮುಂಭಾಗದಲ್ಲಿರುವ ಹಳೆಯ ಕಟ್ಟಡವನ್ನು ತೆಗೆಯಲು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡುವುದು ಮೊದ ಲನೇ ಮಹಡಿಗೆ ತಗಲುವ ವೆಚ್ಚದ ವಿವರ ಮುಂಭಾಗದಲ್ಲಿ ಪಾರ್ಕಿಂಗ್ ,ಗಾರ್ಡನ್ ಮಾಡಲು ಮಹಾನಗರ ಪಾಲಿಕೆ ಅವರಿಗೆ ನಿರ್ದೇಶನ ನೀಡಲು ಕುರಿತಂತೆ ಇರುವ ಒಟ್ಟು ಶಿಕ್ಷಕ ಸಂಘದಿಂದ ನಾಲ್ಕು ಮನವಿಗಳನ್ನು ನಗರದ ಶಾಸಕ ರಿಗೆ ನೀಡಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ,ಪಿಯು ವಿಭಾಗದ ಉಪನಿರ್ದೇಶಕರಾದ ಎಸ್,ಎನ್,ಬಗಲಿ, ಡಯಟ್ ಪ್ರಾಚಾರ್ಯರಾದ ಎಸ್,ಪಿ,ಬಾಡಗಂಡಿ, ಗುರು ಭವನ ಸಮಿತಿಯ ಉಪಾಧ್ಯಕ್ಷರಾದ ಸಿದ್ದು ಹಂಚಿನಾಳ ಗುತ್ತಿಗೆದಾರರಾದ ಸುರೇಶ ಪಾಟೀಲ,ನಗರ ವಲಯದ ಬಿಇಓ ಎಂ,ಬಿ,ಮೋರಟಗಿ,ಎಸ್ ಎನ್ ಪಡಶೆಟ್ಟಿ ,ಆದರ್ಶ ಶಿಕ್ಷಕ ವೇದಿಕೆಯ ಜಿಲ್ಲಾಧ್ಯಕ್ಷರಾದ ಉಮೇಶ ಕವಲಗಿ ಸುರೇಶ ಶೇಡಶ್ಯಾಳ,ಎಸ್, ಎಸ್,ಕೆರೂರ,ಚಡಚಣ ಶಿಕ್ಷಕ ಸಂಘದ ತಾಲೂಕ ಅಧ್ಯಕ್ಷರಾದ ಅನೀಲ ಸೋನ್ನಗಿ,ಸಂಗು ಬಿರಾದಾರ,ಜಿ ಎಸ್ ಬೇವನೂರ ಬಸವರಾಜ ದೋರನ ಹಳ್ಳಿ,ಆರ್,ಕೆ,ಸುರಪುರ,ಬಸವರಾಜ ಬೇನೂರ,ಅಶೋಕ ರಾಥೋಡ,ಶ್ರೀಮತಿ ಡಿ,ಎ,ಕಬಾಡೆ,ಶ್ರೀಮತಿ ಭಾರತಿ ಉಪಾಸೆ,ಪಿ, ಎಸ್, ಚೌಹಾನ್, ಶಿಕ್ಷಕರಾದ ಸಂತೋಷ ಕುಲಕರ್ಣಿ,ಎಚ್,ಕೆ,ಬೂದಿಹಾಳ,ರಾಮಕೃಷ್ಣ,ಸಿಕೆ ಭಜಂತ್ರಿ, ವಸಿಮ್ ಚಟ್ಟರಕಿ,ಆರ್ ಎಂ ಪಾಟೀಲ,ಚೆನ್ನಯ್ಶಾ ಮಠ ಪತಿ,ಶಂಕರ ಕಂಡೆಕಾರ,ಎಸ್ಎಸ್ ಪಟ್ಟಣಶೆಟ್ಟಿ,ಸಿದ್ದ ರಾಮ ಜಲ್ಲಿ,ರಾಜೇಶ್ ಪಾಟೀಲ,ಎಸ್ ಎನ್,ಕನ್ನೂರ ರವೀಂದ್ರ ಉಗಾರ,ಆರ್,ಎಂ,ಮೇತ್ರಿ,ಆನಂದ ಭೂಸ ನೂರ, ರಾಯಪ್ಪ ಇವನಿಗೆ, ಅಶೋಕ ಗಿಡ್ಡಪ್ಪಗೊಳ,ಬಶೀರ ನದಾಫ್, ಜಿ,ಎಸ್ ಅಕ್ಕಿ, ವೀರಭದ್ರಪ್ಪ, ಬಿ ಎಸ್ ಹೊಳಿ, ಎ, ಎನ್, ತಾವರಖೇಡ, ಶ್ರೀಶೈಲ ದೊಡ್ಡಮನಿ,ಅನೀಲ ಕೋಟ್ಯಾಳ,ನಾಗೇಶ ನಾಗೂರ,ಹಾಗೂ 300ಕ್ಕಿಂತ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷರಾದ ಬಿ ಟಿ ಗೌಡರ ಸ್ವಾಗತಿಸಿದರು, ಹನುಮಂತ ಇಂಡಿ ವಂದಿಸಿ ದರು.


Google News

 

 

WhatsApp Group Join Now
Telegram Group Join Now
Suddi Sante Desk