ನವದೆಹಲಿ –
ಸದಾ ಒಂದಿಲ್ಲೊಂದು ಜನಪ್ರಿಯ ಯೋಜನೆ ಗಳ ಮೂಲಕ ಸಾರ್ವಜನಿಕರಿಗೆ ಹತ್ತಿರವಾಗುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಈಗ ಮತ್ತೊಂದು ಮಹತ್ವದ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ.ಹೌದು ದೆಹಲಿ ಶಾಲೆಗಳಲ್ಲಿ ಓದು ತ್ತಿರುವ ಮಕ್ಕಳು ಇನ್ನು ಮುಂದೆ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಪಡೆಯಲಿದ್ದಾರೆ
ಹೌದು ಈ ಕುರಿತು ದೆಹಲಿ CM ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಕಾರವು ದೆಹಲಿ ಶಿಕ್ಷಣ ಮಂಡಳಿ ಮತ್ತು ಅಂತಾರಾಷ್ಟ್ರೀಯ ಶಿಕ್ಷಣ ಮಂಡಳಿಯ ನಡುವೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರ ನಂತರ ಮಕ್ಕಳು ಅಂತರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು ದೆಹಲಿ ಶಾಲಾ ಶಿಕ್ಷಣ ಮಂಡಳಿಯು ಅಂತಾರಾಷ್ಟ್ರೀ ಯ ಬ್ಯಾಕಲೌರಿಯೇಟ್ ಮಂಡಳಿಯೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಇದರಿಂ ದ ದೆಹಲಿಯ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ಸೌಲಭ್ಯಗಳನ್ನು ಈಗ ದೆಹಲಿಯ ಸರ್ಕಾರಿ ಶಾಲೆಗಳಲ್ಲೂ ಮಕ್ಕಳಿಗೆ ಒದಗಿಸಲಾಗುವುದು. ದೆಹಲಿ ಶಿಕ್ಷಣ ಮಂಡಳಿಯ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳು ಈಗ ಅಂತ ರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೆಹಲಿಯಲ್ಲಿ ಎಎಪಿ ಸರ್ಕಾರ ರಚನೆಯಾದ ನಂತರ ಸರ್ಕಾರಿ ಶಾಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ಸುಧಾರಣೆ ಯಾಗಿದೆ ಮತ್ತು ಮಕ್ಕಳ ಫಲಿತಾಂಶವೂ ಸುಧಾರಿ ಸಿದೆ ಎಂದು ಕೇಜ್ರಿವಾಲ್ ಹೇಳಿದರು.ಈ ಒಪ್ಪಂದದ ನಂತರ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿ ರುವ ಬಡ ಮಕ್ಕಳು ಶ್ರೀಮಂತ ಮಕ್ಕಳಂತೆ ಅಂತರಾ ಷ್ಟ್ರೀಯ ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ.ಇನ್ನೂ ದೆಹಲಿಯ ಶಾಲೆಗಳಿಗೆ ವಿದೇಶದಿಂದ ತಜ್ಞರು ಬರುತ್ತಾರೆ ಮತ್ತು ಪ್ರಸ್ತುತ 30 ಶಾಲೆಗಳು ಇದರೊಂದಿಗೆ ಸಂಪರ್ಕ ಹೊಂದಿವೆ ಎಂದರು.ಶಾಲೆಗಳ ಶಿಕ್ಷಕರಿಗೆ ವಿದೇಶದ ತಜ್ಞರಿಂದ ತರಬೇತಿ ಯನ್ನು ನೀಡಲಾಗುವುದು ಹಾಗೂ ಮಕ್ಕಳನ್ನು ಹೇಗೆ ಮೌಲ್ಯಮಾಪನ ಮಾಡುವುದು ಅಂತಾರಾಷ್ಟ್ರೀಯ ಮಂಡಳಿಯ ಪ್ರಕಾರ ಇದನ್ನು ಮಾಡಲಾಗುವುದು ಎಂದು ಅವರು ಹೇಳಿದರು.